Breaking News

ವಿಶ್ವದ ಎತ್ತರದ ಶಿವ ಮೂರ್ತಿ ಇಂದು ಲೋಕಾರ್ಪಣೆ

Spread the love

ವಿಶ್ವದಲ್ಲೇ ಅತೀ ಎತ್ತರದ ಶಿವನ ಪ್ರತಿಮೆ “ವಿಶ್ವಾಸ ಸ್ವರೂಪಂ’ ಶನಿವಾರ ಲೋಕಾರ್ಪಣೆಗೊಳ್ಳಲಿದೆ.ರಾಜಸ್ಥಾನದ ರಾಜಸ್‌ಮಂಡ್‌ ಜಿಲ್ಲೆಯ ನಾಥ್‌ದ್ವಾರ ಪಟ್ಟಣದಲ್ಲಿ ಈ ಪ್ರತಿಮೆ ತಲೆಎತ್ತಿದೆ. ಆಧ್ಯಾತ್ಮಿಕ ನಾಯಕ ಮೊರಾರಿ ಬಾಪು ಅವರು ಈ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದು, ಸಿಎಂ ಅಶೋಕ್‌ ಗೆಹೊÉàಟ್‌, ಸ್ಪೀಕರ್‌ ಸಿ.ಪಿ.

ಜೋಷಿ ಮತ್ತಿತರರು ಭಾಗಿಯಾಗಲಿದ್ದಾರೆ.

9 ದಿನ ಕಾರ್ಯಕ್ರಮ
ಉದಯಪುರದಿಂದ 45 ಕಿ.ಮೀ. ದೂರದಲ್ಲಿ ಧ್ಯಾನಸ್ಥನಾಗಿರುವಂತೆ ಶಿವನ ಪ್ರತಿಮೆ ನಿರ್ಮಿಸಲಾಗಿದೆ. ಪ್ರತಿಮೆ ಲೋಕಾರ್ಪಣೆಗೊಂಡ ಬಳಿಕ ಅ. 29ರಿಂದ ನ. 6ರ ವರೆಗೆ 9 ದಿನಗಳ ಕಾಲ ಸರಣಿ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. 250 ವರ್ಷ ಬಾಳಿಕೆ ಬರು ವಂತೆ ಮತ್ತು ಗಂಟೆಗೆ 250 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದರೂ ತಡೆಯು ವಂಥ ಸಾಮರ್ಥ್ಯವಿರುವಂತೆ ಪ್ರತಿಮೆ ನಿರ್ಮಾಣಗೊಂಡಿದೆ.

ಪ್ರತಿಮೆಯ ಎತ್ತರ- 369 ಅಡಿ
ಪ್ರತಿಮೆಯ ಒಟ್ಟು ತೂಕ – 30,000 ಟನ್‌
ಬಳಕೆಯಾದ ಉಕ್ಕು, ಕಬ್ಬಿಣ – 3000 ಟನ್‌
ಬಳಸಲಾದ ಕಾಂಕ್ರೀಟ್‌- 2.5 ಲಕ್ಷ ಕ್ಯೂಬಿಕ್‌ ಟನ್‌
ಎಷ್ಟು ದೂರದಿಂದ ಪ್ರತಿಮೆ ಗೋಚರಿಸುತ್ತದೆ?- 20 ಕಿ.ಮೀ.
ಕಾಮಗಾರಿಗೆ ತಗುಲಿದ
ಅವಧಿ- 10 ವರ್ಷ
ಎಷ್ಟು ವರ್ಷ ಬಾಳಿಕೆ?- 250


Spread the love

About Laxminews 24x7

Check Also

ಗಣೇಶ ವಿಸರ್ಜನೆಯಂದು ಮಹಾಪ್ರಸಾದ ಹೊರೆಯಾಗದು… ಜಿಲ್ಲಾಡಳಿತ ತನ್ನ ಕಾರ್ಯ ಮುಂದುವರೆಸಲಿ… ಮಹಾಮಂಡಳದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ…

Spread the love ಗಣೇಶ ವಿಸರ್ಜನೆಯಂದು ಮಹಾಪ್ರಸಾದ ಹೊರೆಯಾಗದು… ಜಿಲ್ಲಾಡಳಿತ ತನ್ನ ಕಾರ್ಯ ಮುಂದುವರೆಸಲಿ… ಮಹಾಮಂಡಳದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ