Breaking News

ಆಹ್ವಾನ ಪತ್ರಿಕೆಯಲ್ಲಿ ದಿವಂಗತ ಶಾಸಕ ಆನಂದ ಮಾಮನಿ ಹೆಸರು ಶಿಕ್ಷಣ ಇಲಾಖೆಯ ಯಡವಟ್ಟು..!

Spread the love

ದಿವಗಂತ ಶಾಸಕ ಆನಂದ ಮಾಮನಿ ಹೆಸರು ಆಹ್ವಾನ ಪತ್ರಿಕೆಯಲ್ಲಿ ಹಾಕಿ ಅದ್ವಾನವಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರಾಥಮಿಕ ಪ್ರೌಢ ಶಾಲೆಗಳ ಕ್ರೀಡಾಕೂಟ ಆಯೋಜಿಸಲಾಗಿದೆ. ಇದರ ಆಹ್ವಾನ ಪತ್ರಿಕೆಯಲ್ಲಿ ದಿವಂಗತ ಶಾಸಕ ಆನಂದ ಮಾಮನಿ ಹೆಸರನ್ನು ಹಾಕಿದ್ದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದೇ ತಿಂಗಳ ಅಕ್ಟೋಬರ್ 23ರಂದು ಸವದತ್ತಿ ಶಾಸಕರು ಹಾಗೂ ವಿಧಾನಸಭೆಉ ಉಪಸಭಾಧ್ಯಕ್ಷರು ಆಗಿದ್ದ ಆನಂದ ಮಾಮನಿ ನಿಧನ ಹೊಂದಿದ್ದರು. ನಾಳೆ ಶುಕ್ರವಾರ ನಡೆಯಲಿರುವ ಕ್ರೀಡಾಕೂಟ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಆನಂದ ಮಾಮನಿ ಹೆಸರು ಹಾಕಲಾಗಿದೆ. ತೀರಿ ಹೋದ ಶಾಸಕರ ಹೆಸರು ಪ್ರಿಂಟ್ ಮಾಡಿ ಅಧಿಕಾರಿಗಳು ಅದ್ವಾನ ಮಾಡಿಕೊಂಡಿದ್ದಾರೆ. ನಾಳೆ ಚಿಕ್ಕೋಡಿಯಲ್ಲಿ ಆಯೋಜನೆಗೊಂಡಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟ. ದಿವಂಗತರ ಹೆಸರು ಹಾಕಿ ಯಡವಟ್ಟು ಮಾಡಿಕೊಂಡಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಡೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.


Spread the love

About Laxminews 24x7

Check Also

ಯಲ್ಲಮ್ಮ ದೇವಸ್ಥಾನದ ಹುಂಡಿ ಏಣಿಕೆ: 3.07 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹ

Spread the loveಬೆಳಗಾವಿ: ಸವದತ್ತಿಯ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಸ್ಥಾನದ ಹುಂಡಿಗಳ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, 3.07 ಕೋಟಿ ರೂ.  ಮೌಲ್ಯದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ