Breaking News

‘ಕಿತ್ತೂರು ಕೇಸರಿ’ ಪಟ್ಟಕ್ಕಾಗಿ ಪಟ್ಟುಬಿಡದ ಜಟ್ಟಿಗಳು

Spread the love

ಕಿತ್ತೂರು (ಬೆಳಗಾವಿ ಜಿಲ್ಲೆ): ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಎರಡನೇ ದಿನವಾದ ಮಂಗಳವಾರ ನಡೆದ ರಾಷ್ಟ್ರಮಟ್ಟದ ಮತ್ತು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನೋಡಲು ಅಪಾರ ಸಂಖ್ಯೆಯ ಕ್ರೀಡಾಭಿಮಾನಿಗಳು ಸೇರಿದರು. ಮಹಿಳಾ ಹಾಗೂ ಪುರುಷ ವಿಭಾಗ ಸೇರಿ ಒಟ್ಟು 234 ಪೈಲ್ವಾನರು ಇಲ್ಲಿ ಮುಖಾಮುಖಿಯಾಗಿದ್ದಾರೆ.

 

ಪ್ರತಿವರ್ಷ ಜಂಗಿ ನಿಕಾಲಿ ಕುಸ್ತಿ ನಡೆಯುತ್ತಿದ್ದವು. ಇದೇ ಮೊದಲ ಬಾರಿ ಪಾಯಿಂಟ್ ಆಧರಿತ ಕುಸ್ತಿ ಆಯೋಜಿಸಲಾಗಿತ್ತು. ಎರಡು ದಿನಗಳ ಟೂರ್ನಿಯಲ್ಲಿ ನಡೆದ ಬಹುತೇಕ ಪಂದ್ಯಗಳು ಪೈಪೋಟಿಯಿಂದ ಕೂಡಿದ್ದವು.

ಗೆಲುವಿಗಾಗಿ ಜಟ್ಟಿಗಳು ಹಾಕುತ್ತಿದ್ದ ಪಟ್ಟುಗಳು ಕುಸ್ತಿಪ್ರೇಮಿಗಳನ್ನು ರಂಜಿಸಿದವು. ರೋಚಕತೆಯಿಂದ ಕೂಡಿದ್ದ ಪಂದ್ಯಗಳಲ್ಲಿ ಪೈಲ್ವಾನರು ಎದುರಾಳಿಗಳನ್ನು ಚಿತ್‍ಗೊಳಿಸುತ್ತಿದ್ದಂತೆ ಜನರೂ ಕೇಕೆ ಹಾಕಿ ಸಂಭ್ರಮಿಸಿದರು.

ವಿವಿಧ ವಯೋಮಾನದಲ್ಲಿ ಪುರುಷರಿಗಾಗಿ 7 ವಿಭಾಗ, ಮಹಿಳೆಯರ 6 ಸೇರಿ 13 ವಿಭಾಗಗಳಲ್ಲಿ ಸ್ಪರ್ಧೆ ನಡೆದವು.

ಮೂರು ರಾಜ್ಯಗಳ ಪೈಲ್ವಾನರು ಭಾಗಿ: ‘ಕಿತ್ತೂರು ಕೇಸರಿ’ ಪ್ರಶಸ್ತಿಗಾಗಿ ರಾಷ್ಟ್ರಮಟ್ಟದಲ್ಲಿ 86 ಕೆ.ಜಿ ಮೇಲ್ಪಟ್ಟವರ ವಿಭಾಗ ಹಾಗೂ ‘ರಾಣಿ ಚನ್ನಮ್ಮ ಮಹಿಳಾ ಕೇಸರಿ’ ಪ್ರಶಸ್ತಿಗಾಗಿ ಮಹಿಳೆಯರ 65 ಕೆ.ಜಿ ವಿಭಾಗದಲ್ಲಿ ಕಾದಾಟ ನಡೆಯಿತು. ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶದ ಪೈಲ್ವಾನರು ಗೆಲುವಿಗಾಗಿ ಸೆಣಸಾಟ ನಡೆಸಿದರು.

‘ಕಿತ್ತೂರು ಕುಮಾರ’ ಪ್ರಶಸ್ತಿಗಾಗಿ ರಾಜ್ಯಮಟ್ಟದಲ್ಲಿ 74 ಕೆ.ಜಿ, ‘ಕಿತ್ತೂರು ಕಿಶೋರ’ ಪ್ರಶಸ್ತಿಗಾಗಿ 65 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆ ನಡೆದರೆ, ‘ರಾಣಿ ಚನ್ನಮ್ಮ ಕಿಶೋರಿ’ ಪ್ರಶಸ್ತಿಗಾಗಿ ಮಹಿಳೆಯರ 55 ಕೆ.ಜಿ ವಿಭಾಗದಲ್ಲಿ ಪಂದ್ಯಾಟ ನಡೆದವು.

ಬೆಳಿಗ್ಗೆ ಆರಂಭಗೊಂಡ ಕುಸ್ತಿ ಪಂದ್ಯಾವಳಿ ರಾತ್ರಿಯವರೆಗೂ ಮುಂದುವರಿದಿವೆ.


Spread the love

About Laxminews 24x7

Check Also

ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿ ವರೆಗೂ ಪ್ರತಿಭಟನಾ ರ್ಯಾಲಿ. ಧರ್ಮಸ್ಥಳದ ಭಕ್ತಾಭಿಮಾನಿಗಳ ವೇದಿಕೆಯಿಂದ ಹೋರಾಟ

Spread the love ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಷಡ್ಯಂತ್ರ, ಅಪಪ್ರಚಾರ ವಿಚಾರ ಕುಂದಾನಗರಿ ಬೆಳಗಾವಿಯಲ್ಲಿ ಧರ್ಮಸ್ಥಳ ಭಕ್ತರಿಂದ ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ