Breaking News

ಚೇತನ್​ಗೆ ಯಾಕೆ ಉರಿ? ಎಂದು ಕಿಡಿಕಾರಿದ ಮುತಾಲಿಕ್​; ಹೇಳಿಕೆ ವಾಪಸ್ ಪಡೆಯಲು ಆಗ್ರಹ..

Spread the love

ಧಾರವಾಡ: ‘ಕಾಂತಾರ’ ಸಿನಿಮಾ ಹಿನ್ನೆಲೆಯಲ್ಲಿ ಕರಾವಳಿಯ ಭೂತದ ಕೋಲದ ಆಚರಣೆ ಹಾಗೂ ಹಿಂದುತ್ವದ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಚೇತನ್ ವಿರುದ್ಧ ಇದೀಗ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕೂಡ ಕಿಡಿಕಾರಿದ್ದು, ಹೇಳಿಕೆ ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.

 

‘ಕಾಂತಾರ’ ಸಿನಿಮಾ ಹಿನ್ನೆಲೆಯಲ್ಲಿ ನಟ ಚೇತನ್ ಅಪಸ್ವರ ಎತ್ತಿರುವ ವಿಚಾರವಾಗಿ ಪ್ರತಿಕ್ರಿಯಿರುವ ಪ್ರಮೋದ್ ಮುತಾಲಿಕ್​, ಚೇತನ್​ಗೆ ಯಾಕೆ ಉರಿ? ಎಂದು ಕಿಡಿಕಾರಿದ್ದಾರೆ. ಧಾರವಾಡದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಮುತಾಲಿಕ್, ಚೇತನ್ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಚೇತನ್‌ಗೆ ಇಲ್ಲಿನ ಮಣ್ಣಿನ ಗುಣ, ಸೊಗಡು ಗೊತ್ತಿಲ್ಲ. ಅವರು ಹುಟ್ಟಿದ್ದು ಎಲ್ಲಿಯೋ, ಬೆಳೆದಿದ್ದೂ ಎಲ್ಲಿಯೋ? ಈಗ ನಟ ಅಂತ ಇಲ್ಲಿ ಬಂದು ಪ್ರವೇಶ ಮಾಡಿದ್ದಾರೆ. ಅವರೊಬ್ಬ ನಾಸ್ತಿಕವಾದಿ, ಪಕ್ಕಾ ಕಮ್ಯೂನಿಸ್ಟ್‌ವಾದಿ ಬುದ್ಧಿಜೀವಿ. ಈ ದೇಶದ ಸಂಸ್ಕೃತಿ ಅವಹೇಳನ ಮಾಡುವುದೇ ಬುದ್ಧಿಜೀವಿಗಳ ಕುಕೃತ್ಯ. ಅದರಲ್ಲಿ ಚೇತನ್ ಸಹ ಒಬ್ಬರು. ಭೂತದಕೋಲ ಹಿಂದೂಗಳದ್ದಲ್ಲ ಅಂತ ಹೇಳಿದ್ದಾರೆ, ಅದು ಮೂರ್ಖತನದ ಹೇಳಿಕೆ, ಅದನ್ನು ವಾಪಸ್ ಪಡೆಯಬೇಕು ಎಂದು ಮುತಾಲಿಕ್ ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಬೀದರ್​ ಜಿಲ್ಲಾ ಪೊಲೀಸ್ ಅಕ್ಕ ಪಡೆ ರಾಜ್ಯಕ್ಕೆ ಮಾದರಿ: ಸಚಿವ ಈಶ್ವರ್ ಖಂಡ್ರೆ

Spread the loveಬೀದರ್ : ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಆರಂಭಿಸಿರುವ ಬೀದರ್ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ