Breaking News

ರೀವೆಂಜ್ ಗಾಗಿ ಹುಬ್ಬಳ್ಳಿಯಲ್ಲಿ ಬಿತ್ತು ಮತ್ತೊಂದು ಹೆಣ

Spread the love

ಆಸ್ಪತ್ರೆಯ ಶವಾಗಾರದ ಮುಂದೆ ನಿಂತು ಅಗಲಿದ ಗೆಳೆಯನ ಅಂತಿಮ ದರ್ಶನಕ್ಕೆ ಬಂದಿರೋ ಗೆಳೆಯರು,ಈ ಕೊಲೆ ಮಾಡಿದ್ದು ಕೇವಲ ಮೂರು ಜನರು ಮಾತ್ರವಲ್ಲ ಇನ್ನು ಕೆಲವರು ಇದ್ದಾರೆ ಎಂದು ಆರೋಪ ಮಾಡುತ್ತಿರೋ ಸಂಬದಿಕರು,ಶವಾಗಾರದ ಮುಂದೆ ಗೆಳೆಯರ ನಡುವೆ ಗುಸು ಗುಸು ಮಾತುಗಳು, ಈ ಎಲ್ಲ ದ್ರಶ್ಯಗಳಿಗೆ ಸಾಕ್ಷಿಯಾಗಿದ್ದು ಆ ಯುವಕನ ಸಾವು,ಅಷ್ಟಕ್ಕೂ ಇದೇನು ಕೊಲೆಯ ಕಹಾನಿ ಅಂತೀರಾ ಈ ಸ್ಟೋರಿಯನ್ನು ಒಮ್ಮೆ ನೋಡಿ…

ಹೀಗೆ ಫೋಟೋ ದಲ್ಲಿ ಕಾಣುತ್ತಿರೋ ಈತನ ಹೆಸರು ನವೀನ್ ಅಂತಾ ದೇಸಾಯಿ ಓಣಿಯ ನಿವಾಸಿ ಹುಬ್ಬಳ್ಳಿಯ ಸಿಬಿಟಿ ಬಳಿಯಲ್ಲಿ ಆಪ್ಟಿಕಲ್ ಅಂಗಡಿ ಹಾಕಿಕೊಂಡು ಹೊಸದಾಗಿ ಉದ್ಯೋಗ ಶುರುಮಾಡಿದ್ದ,ಆದ್ರೆ ಕಳೆದ ನಾಲ್ಕು ದಿನಗಳ ಹಿಂದೆ ಸಿಂಪಿಗಲ್ಲಿಯ ಬಾರ್ ಬಳಿ ಮೂರು ಜನರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಆದ್ರೆ ತಲೆಯಲ್ಲಿ ತೀವ್ರ ರಕ್ತಸ್ರಾವ ಆದ ಪರಿಣಾಮ ಫಲಕಾರಿಯಾಗದೆ ಸಾವನಪ್ಪಿದ್ದಾನೆ,ಆದ್ರೆ ಈತನ ಸಾವಿಗೆ ಕೇವಲ ಮೂರು ಜನ ಮಾತ್ರವಲ್ಲ ಇನ್ನು ಕೆಲವರು ಭಾಗಿಯಾಗಿದ್ದಾರೆ ಎಂದು ಕೊಲೆಯಾದ ನವೀನನ ತಮ್ಮ ಆರೋಪ ಮಾಡುತ್ತಿದ್ದಾನೆ.

 

ಈಗಷ್ಟೇ ಹೊಸದಾಗಿ ಆಪ್ಟಿಕಲ್ ಅಂಗಡಿ ತೆಗೆದು ತನ್ನ ಕುಟುಂಬ ನಿರ್ವಹಣೆ ಮಾಡಲು ಮುಂದಾಗಿದ್ದ,ಆದ್ರೆ ಈತನಿಗೆ ಪರಿಚಯ ಇಲ್ಲದೆ ಇರೋರು ಬಂದು ಕೊಲೆ ಮಾಡುತ್ತಾರೆ ಅಂದ್ರೆ ಏನು ಅರ್ಥ ಅಂತಾ,ಯಾರದೋ ದ್ವೇಷಕ್ಕೆ ನಮ್ಮ ಹುಡುಗನ್ನು ಕೊಲೆ ಮಾಡಿರುವುದು ಎಷ್ಟು ಸರಿ ಎಂದು ನವೀನನ ಸಂಬಂದಿಕರು ತಮ್ಮ ಕಷ್ಟವನ್ನು ಮಾಧ್ಯಮದ ಮುಂದೆ ಹೇಳಿಕೊಂಡರು.


Spread the love

About Laxminews 24x7

Check Also

ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ

Spread the love ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ