Breaking News

ಮಹೇಶ್‌ ಬಾಬು – ರಾಜಮೌಳಿ ಸಿನಿಮಾಕ್ಕೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಎಂಟ್ರಿ?

Spread the love

ಮುಂಬಯಿ: ಆರ್‌ ಆರ್‌ ಆರ್‌ ಯಶಸ್ಸಿನ ಬಳಿಕ ನಿರ್ದೇಶಕ ಎಸ್.ಎಸ್‌ ರಾಜಮೌಳಿ ಮಹೇಶ್‌ ಬಾಬು ಅವರೊಂದಿಗೆ ತಮ್ಮ ಮುಂದಿನ ಸಿನಿಮಾ ಮಾಡಲಿದ್ದಾರೆ. ಪ್ಯಾನ್‌ ಇಂಡಿಯಾ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ.

ಕೆಲ ದಿನಗಳ ಹಿಂದೆ ರಾಜಮೌಳಿ ಮಹೇಶ್‌ ಬಾಬು ಅವರ 29ನೇ ಸಿನಿಮಾದ ಬಗ್ಗೆ ಮಾತಾನಾಡುತ್ತಾ, “ಇದೊಂದು ವಿಶ್ವ ಪರ್ಯಟನೆಯುಳ್ಳ ಸಾಹಸಮಯವದ ಸಿನಿಮಾ, ಈ ಸಿನಿಮಾ ಪ್ರತಿಯೊಬ್ಬ ಪ್ರೇಕ್ಷಕರನ್ನು ಸೆಳೆಯಲಿದೆ.

ಇದು ಜೇಮ್ಸ್‌ ಬಾಂಡ್‌ ಅಥವಾ ಇಂಡಿಯಾನ ಜೋನ್ಸ್‌ ಸಾಹಸದ ಹಾಗೆ ಭಾರತೀಯ ಶೈಲಿಯಲ್ಲಿ ಮೂಡಿಬರುವ ಚಿತ್ರ. ಥಿಯೇಟರ್‌ ನಲ್ಲಿ ಈ ಸಿನಿಮಾ ಎಲ್ಲರನ್ನೂ ರೋಮಾಂಚನಗೊಳಿಸಲಿದೆ” ಎಂದಿದ್ದರು.

ಸಿನಿಮಾದ ಸ್ಕ್ರಿಪ್ಟ್‌ ತಯಾರಿಯಲ್ಲಿದೆ. ಆ ಬಳಿಕ ಮಹೇಶ್‌ ಬಾಬು ಅವರೊಂದಿಗೆ ವರ್ಕ್‌ ಶಾಪ್‌ ನಡೆಸಲಿದ್ದೇನೆ ಎಂದು ರಾಜಮೌಳಿ ಅವರು ಹೇಳಿದ್ದರು. ಈಗ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ಹೊರ ಬಿದ್ದಿದೆ.

ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ರಾಜಮೌಳಿ ಅವರ ಮುಂದಿನ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿ ಮಹೇಶ್‌ ಬಾಬು ಅವರೊಂದಿಗೆ ದೀಪಿಕಾ ಸ್ಕ್ರೀನ್‌ ಹಂಚಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

ಆದರೆ ಈ ಬಗ್ಗೆ ಇನ್ನು ಕೂಡ ಅಧಿಕೃತವಾಗಿ ಚಿತ್ರ ತಂಡ ಎಲ್ಲೂ ಮಾಹಿತಿಯನ್ನು ರಿವೀಲ್‌ ಮಾಡಿಲ್ಲ. ಸದ್ಯ ಮಹೇಶ್‌ ಬಾಬು ತಿವಿಕ್ರಮ್‌ ಅವರ ʼಎಸ್‌ ಎಸ್‌ ಬಿ 28ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದೀಪಿಕಾ ಪಡುಕೋಣೆ ಪ್ರಭಾಸ್‌ ಅವರ ʼಪ್ರಾಜೆಕ್ಟ್‌ ಕೆʼ ಎಂಬ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Spread the love

About Laxminews 24x7

Check Also

ಮುಳುಗಿದ ಲೋಳಸೂರ ಸೇತುವೆ: ಡಿಸಿ ಮೊಹಮ್ಮದ್ ರೋಷನ್ ಪರಿಶೀಲನೆ

Spread the loveಬೆಳಗಾವಿ: ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳಿಂದ‌ ಮುಳುಗಡೆ ಆಗುವ ನಾಲ್ಕು ಸೇತುವೆಗಳನ್ನು ಹೊಸದಾಗಿ ನಿರ್ಮಿಸುವ ಯೋಜನೆ ಇದೆ. ಇದಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ