Breaking News

ಸಾರಿಗೆ ಸಚಿವರೇ ಎದ್ದೇಳಿ.. ಬೆಂಗಳೂರು-ಬಳ್ಳಾರಿ, ರಾಯಚೂರಿಗೆ 1500, ಕಲಬುರ್ಗಿಗೆ 2500

Spread the love

ಬ್ಬದ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಮತ್ತಿತರರ ನಗರ ಪ್ರದೇಶಗಳಿಂದ ತಮ್ಮ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ನಿಗಧಿಪಡಿಸಿದ ದರವನ್ನಷ್ಟೇ ಪಡೆಯಬೇಕು. ಇಲ್ಲದಿದ್ದರೆ ರೂಟ್ ಪರ್ಮಿಟ್ ತಕ್ಷಣದಿಂದಲೇ ರದ್ದು ಪಡಿಸಲಾಗುತ್ತದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಎಚ್ಚರಿಕೆ ಕೇವಲ ಮಾಧ್ಯಮಗಳ ಹೇಳಿಕೆಗಷ್ಟೇ ಸೀಮಿತವಾಗಿದೆ.

 

ದೀಪಾವಳಿ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆಗಳಿದ್ದು ದೂರದೂರುಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ದಿನ ಕಳೆದಂತೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ಗಳ ಸಂಖ್ಯೆ ಕೂಡ ಹೆಚ್ಚಿಸಲಾಗಿದೆ. ಹಬ್ಬದ ಸಂದರ್ಭದಲ್ಲಿ ರಾಜ್ಯದ ವಿವಿದೆಡೆ ಕೆಎಸ್‌ಆರ್‌ಟಿಸಿ ಸ್ಪೆಷಲ್ ಬಸ್‌ಗಳು ಓಡಾಡಲಿವೆ. ಹೀಗೆ ಓಡಾಡುವ ಹೆಚ್ಚುವರಿ ಬಸ್‌ಗಳ ಪ್ರಯಾಣ ದರ ಕೂಡ ಹೆಚ್ಚಾಗಲಿದೆ. ಕೆಎಸ್‌ಆರ್‌ಟಿಸಿ ಸ್ಪೆಷಲ್ ಬಸ್‌ಗಳ ಪ್ರಯಾಣ ದರ 20% ರಷ್ಟು ಹೆಚ್ಚಿಗೆ ಮಾಡಲಾಗಿದೆ. ಇನ್ನೂ ನಿತ್ಯ ಓಡಾಡುವ ಬಸ್‌ಗಳ ದರದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

ಖಾಸಗಿ ಆಯಪ್‌ ಮೂಲಕ ಬಸ್‌ಗಳ ಟಿಕೆಟ್ ದರ ಪರಿಶೀಲಿಸಿದಾಗ ಜನರು ಬೆಚ್ಚಿಬೀಳುತ್ತಿದ್ದಾರೆ. ಸಾಮಾನ್ಯ ದಿನಗಳಿಗಿಂತ ಮೂರರಿಂದ ನಾಲ್ಕು ಪಟ್ಟು ಏರಿಕೆ ಮಾಡಲಾಗಿದೆ. ಉದಾಹರಣೆಗೆ ಸಾರಿಗೆ ಸಚಿವರು ತವರು ಜಿಲ್ಲೆಗೆ ಬಳ್ಳಾರಿಗೆ ತೆರಳಲು ಬೆಂಗಳೂರು-ಬಳ್ಳಾರಿ ಬಸ್ ಟಿಕೆಟ್ ದರ ಪರಿಶೀಲಿಸಿದಾಗ ಅ.22ಕ್ಕೆ ಎಸ್‌ಎಂಆರ್‌ಎಸ್ ಬಸ್ ಟಿಕೆಟ್ ದರ 1000 ರೂ., ಪೂಜಾ ಟ್ರಾವೆಲ್ಸ್ 1,234 ರೂ., ಎಸ್‌ಆರ್‌ಎಸ್‌ 1350 ರೂ., ಸುನೀಲ್ ರೋಡ್‌ಲೈನ್ಸ್, ಶ್ರೀ ಎಸ್‌ಆರ್‌ಎಂ ಟೂರ್ಸ್ ಅಂಡ್ ಟ್ರಾವೆಲ್ಸ್ ಮತ್ತು ಆರೆಂಜ್ ಟೂರ್ಸ್ ಅಂಡ್ ಟ್ರಾವೆಲ್ಸ್ 1500 ರೂ. ನಿಗದಿ ಮಾಡಿವೆ. ಸಚಿವರ ಎಚ್ಚರಿಕೆ ಇಂತಹ ಖಾಸಗಿ ಬಸ್‌ಗಳ ಮಾಲೀಕರು ಕ್ಯಾರೆ ಎನ್ನದೆ ಅವರ ಊರಿಗೇ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ.

ಖಾಸಗೀ ಬಸ್‌ಗಳು ರಾಜ್ಯದ ವಿವಿಧೆಡೆ ಪ್ರಯಾಣಿಸುತ್ತವೆ. ಹಬ್ಬದ ಸಂದರ್ಭದಲ್ಲಿ ಇದರ ಪ್ರಯಾಣ ದರ ದುಪ್ಪಟ್ಟಾಗಿರುತ್ತದೆ. ಈ ವೇಳೆ ಪ್ರಯಾಣಿಕರ ಜೋಬಿಗೆ ಕತ್ತರಿ ಬೀಳುವುದಂತೂ ಗ್ಯಾರಂಟಿ. ಖಾಸಗೀ ಬಸ್‌ಗಳ ಪ್ರಯಾಣ ದರದಲ್ಲಿ ಇಂತಿಷ್ಟೇ ದರ ನಿಗದಿ ಮಾಡಬೇಕು ಎನ್ನುವ ನಿಯಮವಿಲ್ಲ. ವರ್ಷವಿಡಿ ಸಾಮಾನ್ಯ ಕೆಎಸ್‌ಆರ್‌ಟಿಸಿ ಪ್ರಯಾಣ ದರದಲ್ಲಿ ಓಡಾಡುವ ಬಸ್‌ಗಳು ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣ ದರದಲ್ಲಿ ಓಡಾಡುತ್ತವೆ. ಇದರಿಂದ ಸಾಮಾನ್ಯ ಜನರಿಗೆ ಇದರ ಹೊರೆ ಬೀಳಲಿದೆ. ಉತ್ತರ ಕರ್ನಾಟಕದ ಕೆಲ ಖಾಸಗೀ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೇಗಿದೆ ಎನ್ನುವುದನ್ನು ನೋಡುವುದಾದರೆ-

ರಾಯಚೂರು, ಗುಲ್ಬರ್ಗ, ಬಳ್ಳಾರಿ ಮೂರು ಜಿಲ್ಲೆಗಳ ಖಾಸಗೀ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೇಗಿದೆ ಎನ್ನುವುದನ್ನು ನೋಡುವುದಾದರೆ-

ಕೆಎಸ್‌ಆರ್‌ಟಿಸಿ ಪ್ರಯಾಣ ದರ-

ಬೆಂಗಳೂರಿನಿಂದ ರಾಯಚೂರಿಗೆ ಎಸಿ ಸ್ಲೀಪರ್ ಬಸ್‌ಗಳು 1201 ಇದ್ದರೆ, ನಾನ್ ಎಸಿ ಸ್ಲೀಪರ್ ಬಸ್‌ಗಳು 850 ರೂಪಾಯಿ ದರ ಇದೆ.

ಬೆಂಗಳೂರಿನಿಂದ ಗುಲ್ಬರ್ಗಾ ಕಡೆಗೆ ಪ್ರಯಾಣಿಸುವ ಎಸಿ ಸ್ಲೀಪರ್ ಬಸ್‌ಗಳು 1039 ಇದ್ದರೆ, ನಾನ್ ಎಸಿ ಸ್ಲೀಪರ್ ಬಸ್‌ಗಳು 930 ರೂಪಾಯಿ ದರ ಇದೆ.

ಬೆಂಗಳೂರಿನಿಂದ ಬಳ್ಳಾರಿ ಕಡೆಗೆ ಪ್ರಯಾಣಿಸುವ ಎಸಿ ಸ್ಲೀಪರ್ ಬಸ್‌ಗಳು 814 ಇದ್ದರೆ, ಸಾಮಾನ್ಯ ಬಸ್‌ಗಳ ಪ್ರಯಾಣ ದರ 372 ರೂಪಾಯಿ ಇದೆ.

ಇನ್ನೂ ಖಾಸಗೀ ಬಸ್‌ಗಳ ಪ್ರಯಾಣ ದರವನ್ನು ನೋಡುವುದಾರೆ-

ವಿಆರ್‌ಎಲ್ ( VRL) ಬೆಂಗಳೂರಿನಿಂದ ರಾಯಚೂರಿಗೆ ನಾನ್ ಎಸಿ ಸ್ಲೀಪರ್ ಬಸ್‌ಗಳು 1600 ರೂಪಾಯಿ ಪ್ರಯಾಣ ದರವನ್ನು ಹೊಂದಿವೆ.

ವಿಆರ್‌ಎಲ್ ( VRL) ಬೆಂಗಳೂರಿನಿಂದ ಗುಲ್ಬರ್ಗಾಗೆ ನಾನ್ ಎಸಿ ಸ್ಲೀಪರ್ ಬಸ್‌ಗಳು 2000- 3000 ರೂಪಾಯಿ ಪ್ರಯಾಣ ದರವನ್ನು ಹೊಂದಿವೆ.


Spread the love

About Laxminews 24x7

Check Also

ಡಿಸಿ ಮುಂದೆ ಅಳಲು ತೋಡಿಕೊಂಡ ನಿರಾಶ್ರಿತರು

Spread the loveಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಗೋಕಾಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ