ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಆಟೋ ಚಾಲಕನೊಬ್ಬ ಬಾಲಕಿಗೆ ಕಿರುಕುಳ ನೀಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಆಟೋ ಚಾಲಕ ಬಾಲಕಿಯನ್ನು ಬಲವಂತವಾಗಿ ಆಟೋದೊಳಗೆ ಎಳೆಯಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲ ಚಾಲಕ ಬಾಲಕಿಯ ಕೈ ಹಿಡಿದು ಆಟೋವನ್ನು ಚಲಾಯಿಸಿಕೊಂಡು ಸ್ವಲ್ಪ ದೂರದವರೆಗೆ ಎಳೆದೊಯ್ದಿದ್ದಾನೆ. ಬಳಿಕ ಬಾಲಕಿ ನೆಲಕ್ಕೆ ಉರುಳಿಬಿದ್ದಿದ್ದಾಳೆ.
ಕೂಡಲೇ ಸ್ಥಳೀಯರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆಟೋ ಚಾಲಕನ ಕೃತ್ಯ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆ ಆಗಿದೆ. ಸ್ಥಳೀಯ ಮಾಜಿ ಕಾರ್ಪೊರೇಟರ್ ಸಂಜಯ್ ವಘುಲೆ ಬಾಲಕಿಯನ್ನು ಠಾಣೆಗೆ ಕರೆದೊಯ್ದು ರಿಕ್ಷಾ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಲೆ ಮರೆಸಿಕೊಂಡಿದ್ದ ಆಟೋ ಚಾಲಕ ಕಟಿಕದಾಳ ಅಲಿಯಾಸ್ ರಾಜು ಅಬ್ಬಯ್ಯನನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ.