ಪಣಜಿ: ಗೋವಾದ ಜಗತ್ಪ್ರಸಿದ್ಧ ದೂಧ್ ಸಾಗರ್ ಪ್ರವಾಸೋದ್ಯಮ ಸೋಮವಾರದಿಂದ ಆರಂಭಗೊಂಡಿದ್ದು, ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು ಸದ್ಯ ಪ್ರತಿದಿನ 150 ಕ್ಕೂ ಜೀಪ್‍ಗಳ ಮೂಲಕ ಪ್ರವಾಸಿಗರು ಜಲಪಾತ ವೀಕ್ಷಣೆಗೆ ತೆರಳುತ್ತಿದ್ದಾರೆ.
ಗೋವಾದ ದೂಧ್ ಸಾಗರ್ ಜಲಪಾತವು ದೇಶ ವಿದೇಶದ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ದೂಧಸಾಗರ ಜಲಪಾತ ವೀಕ್ಷಣೆಗೆರ ಗೋವಾದ ಕುಳೆ ಮೂಲಕ ಹೆಚ್ಚಿನ ಮಳೆಯಾಗುವ ಸಂದರ್ಭದಲ್ಲಿ ತೆರಳಲು ಅಸಾಧ್ಯವಾಗಿದೆ. ಇದೀಗ ಮಳೆ ಕಡಿಮೆಯಾಗಿರುವುದರಿಂದ ಜಲಪಾತ ವೀಕ್ಷಣೆಗೆ ತೆರಳಲು ಸಾಧ್ಯವಾಗಿದೆ. ಆದರೆ ಕರ್ನಾಟಕದ ಬೆಳಗಾವಿ ಭಾಗದಲ್ಲಿ ಹೆಚ್ಚಿನ ಮಳೆಯಾದರೆ ಜಲಪಾತಕ್ಕೆ ತೆರಳುವ ಮಾರ್ಗ ಮತ್ತೆ ಬಂದ್ ಆಗಲಿದೆ. ಬುಧವಾರ ಸಂಜೆ ಕರ್ನಾಟಕದಲ್ಲಿ ಮಳೆ ಸುರಿದ ಕಾರಣ ಜಲಪಾತದ ನೀರಿನ ಹರಿವು ಹೆಚ್ಚಳವಾದ ಕಾರಣ ಜಲಪಾತ ವೀಕ್ಷಿಸಲು ಬಂದಿದ್ದ ಹಲವು ಪ್ರವಾಸಿಗರು ಜಲಪಾತ ಪರಿಸರದಲ್ಲಿ ಸಿಲುಕಿಕೊಂಡಿರುವಂತಾಗಿತ್ತು. ನಂತರ ಗುರುವಾರ ಬೆಳಗ್ಗೆ ನೀರಿನ ಹರಿವು ಇಳಿದ ನಂತರ ವಾಪಸ್ಸಾಗುವಂತಾಗಿತ್ತು.
ಸದ್ಯ ಜಲಪಾತ ವೀಕ್ಷಿಸಲು ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸದ್ಯ ಪ್ರತಿದಿನ ಸರಾಸರಿ 150 ಕ್ಕೂ ಹೆಚ್ಚು ಜೀಪ್‍ಗಳ ಮೂಲಕ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಈ ಸಂಖ್ಯೆ ಮುಂಬರುವ ದಿನಗಳಲ್ಲಿ 400 ಜೀಪ್‍ಗಳ ವರೆಗೂ ಹೆಚ್ಚಳವಾಗಲಿದೆ.