ಬ್ರೆಸಿಲಿಯಾ: ಗ್ರಾಹಕರಿಗೆ ಕೇವಲ ಐ-ಫೋನ್ ನೀಡಿ, ಚಾರ್ಜರ್ ನೀಡದ ಆಯಪಲ್ ಕಂಪನಿಗೆ ಬ್ರೆಜಿಲ್ ನ್ಯಾಯಾಲಯ ಬರೋಬ್ಬರಿ 2 ಕೋಟಿ ಡಾಲರ್ ದಂಡ ವಿಧಿಸಿದೆ.
“ಗ್ರಾಹಕರಿಗೆ ಕೇವಲ ಫೋನ್ ಪೂರೈಸಿ, ಚಾರ್ಜರ್ ನೀಡದಿರುವುದು ಕೆಟ್ಟ ಪದ್ಧತಿಯಾಗಿದೆ.
ಇದು ಗ್ರಾಹಕರಿಗೆ ಹೆಚ್ಚುವರಿ ವಸ್ತುಗಳನ್ನು ಖರೀದಿಸಲು ಬಲವಂತಪಡಿಸಿದಂತೆ,’ ಎಂದು ಬ್ರೆಜಿಲ್ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಬ್ರೆಜಿಲಿಯನ್ ಗ್ರಾಹಕರ ಸಂಘವು ಆಯಪಲ್ ಕಂಪನಿಯ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದೇ ರೀತಿ ಚಾರ್ಜರ್ ಇಲ್ಲದೇ ಐಫೋನ್ 12 ಮತ್ತು 13 ಮಾರಾಟ ಸಂಬಂಧ ಸೆಪ್ಟೆಂಬರ್‌ನಲ್ಲಿ ಬ್ರೆಜಿಲ್ ನ್ಯಾಯಾಲಯವು ಆಯಪಲ್ ಕಂಪನಿಗೆ 25 ಲಕ್ಷ ಡಾಲರ್ ದಂಡ ವಿಧಿಸಿತ್ತು.