Breaking News

ಶಿಕ್ಷಕರು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ರಾಜ್ಯದ ಶಾಲೆಗಳಿಗೆ ಅ. 31 ರವರೆಗೂ ದಸರಾ ರಜೆ ವಿಸ್ತರಣೆ.?

Spread the love

ಬೆಂಗಳೂರು : ನಾಡಹಬ್ಬ ದಸರಾ ಹಿನ್ನೆಲೆ ರಾಜ್ಯದ ಶಾಲೆಗಳಿಗೆ ಅ.16 ರವರೆಗೆ ದಸರಾ ರಜೆ ನೀಡಲಾಗಿದೆ.ದೀಗ ದಸರಾ ರಜೆಯನ್ನು ಅ. 31ರವರೆಗೆ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಭಾರೀ ಒತ್ತಡಗಳು ಬರುತ್ತಿದೆ .

 

ಬೇಸಿಗೆ ರಜೆಯಲ್ಲಿ 15 ದಿನ ಹಾಗೂ ದಸರಾ ರಜೆಯಲ್ಲಿ 17 ದಿನ ಸೇರಿ ಒಟ್ಟು 37 ದ ದಿನಗಳ ರಜೆಯನ್ನು ಕಡಿತಗೊಳಿಸಲಾಗಿದ್ದು, ಈ ವಿಚಾರ ಪೋಷಕರು ಹಾಗೂ ಶಿಕ್ಷಕರಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಕೆಲ ಬಿಜೆಪಿ ಶಾಸಕರು ಅಕ್ಟೋಬರ್ 31 ರವರೆಗೆ ದಸರಾ ರಜೆ ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರ ಮೇಲೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ.

ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ರಜೆ ಕಡಿತಗೊಳಿಸಿರುವುದು ಅವೈಜ್ಞಾನಿಕವಾಗಿದ್ದು, ರಜೆ ವಿಸ್ತರಣೆಗೆ ಮಧ್ಯ ಪ್ರವೇಶಿಸುವಂತೆ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಹೀಗಾಗಿ ಸರ್ಕಾರ ದಸರಾ ರಜೆ ಮಾಡಲಿದ್ಯಾ ಎಂಬ ಕುತೂಹಲ ಮೂಡಿದೆ.

ಈ ಬಾರಿ ದಸರಾ ರಜೆ ಹಲವು ಗೊಂದಲಗಳಿಗೆ ಕಾರಣವಾಗಿತ್ತು, ಕೆಲವು ಜಿಲ್ಲೆಗಳಲ್ಲಿ ನವರಾತ್ರಿ ಆರಂಭವಾದ ದಿನ ರಜೆ ಕೊಟ್ಟಿದ್ದರೆ, ಕೆಲವು ಕಡೆ ಅ.3 ರಿಂದ ನೀಡಲಾಗಿತ್ತು. ಅಲ್ಲದೇ ಕೊರೊನಾ ಸಂದರ್ಭದಲ್ಲಿ ಆದ ಶೈಕ್ಷಣಿಕ ವರ್ಷ ನಷ್ಟವನ್ನು ಭರಿಸುವ ಸಲುವಾಗಿ ರಜೆ ಕಡಿತಗೊಳಿಸಿತ್ತು ಈ ವಿಚಾರ ಪೋಷಕರು ಹಾಗೂ ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿತ್ತು ಇದೀಗ ಕೆಲ ಬಿಜೆಪಿ ಶಾಸಕರು ಅಕ್ಟೋಬರ್ 31 ರವರೆಗೆ ದಸರಾ ರಜೆ ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರ ಮೇಲೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ.


Spread the love

About Laxminews 24x7

Check Also

ಗೋವಿನ ಗೆಜ್ಜೆಯಲ್ಲಿ ನಿರ್ಮಾಣವಾಗಿರುವ ಗಣೇಶನ ಮೂರ್ತಿ

Spread the loveದಾವಣಗೆರೆ : ಗಣೇಶ ಹಬ್ಬ ಬಂತು ಎಂದರೆ ಸಾಕು ತರಹೇವಾರಿ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪನೆ ಮಾಡಿ ವಿಘ್ನ ನಿವಾರಕ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ