Breaking News

ಅಂಚೆ ಇಲಾಖೆ: 399ರೂ.ಗೆ 10 ಲಕ್ಷ ರೂ. ಅಪಘಾತ ವಿಮೆ, ಖಾತೆ ತೆರೆಯಲು ಈ ಮಾಹಿತಿ ತಿಳಿಯಿರಿ

Spread the love

ಬೆಂಗಳೂರು, ಅಕ್ಟೋಬರ್ 14: ಜನಸಾಮಾನ್ಯರಿಗೆ ನೆರವಾಗಲೆಂದು ಭಾರತೀಯ ಅಂಚೆ ಇಲಾಖೆಯು ಅತ್ಯಂತ ಕಡಿಮೆ ಹಣದಲ್ಲಿ ಭಾರಿ ಮೊತ್ತದ ಅಪಘಾತ ವಿಮೆಯನ್ನು ಪರಿಚಯಿಸಿದೆ.

ಆಕಸ್ಮಿಕ ಅವಘಡಗಳಿಗೆ ತುತ್ತಾದಾಗ ಅಂಚೆ ಕಚೇರಿಯ ಈ ಅಲ್ಪ ಮೊತ್ತದ ಅಪಘಾತ ವಿಮೆ ಆರ್ಥಿಕವಾಗಿ ಸಹಾಯಕ್ಕೆ ಬರಲಿದೆ.

ಕನಿಷ್ಠ 18ರಿಂದ ಗರಿಷ್ಠ 65ವರ್ಷದ ಒಳಗಿನವರು ಕೂಡಲೇ ಖಾತೆ ತೆರೆದು ಈ ವಿಮೆಯ ಅನುಕೂಲ ಪಡೆಯಬಹುದಾಗಿದೆ.

ಹತ್ತಾರು ಆಕಸ್ಮಿಕ ಅಪಘಾತಗಳಿಗೆ ಪರಿಹಾರ ಪಡೆಯಲು ಕೂಡಲೇ ಈ ವಿಮೆಯ ಪ್ರಯೋಜನ ಪಡೆಯಬಹುದಾಗಿದೆ. ನಿಮ್ಮ ಹತ್ತಿರದ ಅಂಚೆ ಕಚೇರಿಗೆ ತೆರಳಿ ವಾರ್ಷಿಕವಾಗಿ 399 ರೂ. ಹಣ ಕಟ್ಟಿದರೆ ಈ 10ಲಕ್ಷ ರೂ. ಅಪಘಾತ ವಿಮೆಗೆ ಅರ್ಹರಾಗುತ್ತೀರಿ. ಈ ವಿಮೆಯ ಫಲಾನುಭವಿಗಳು ಆಕಸ್ಮಿಕವಾಗಿ ಅಪಘಾತಕ್ಕೆ ತುತ್ತಾದರೆ ಅಥವಾ ಅಂಚೆ ಇಲಾಖೆ ಸೂಚಿಸಿರುವ ಇನ್ನಿತರ ಅವಘಡದ ಸನ್ನಿವೇಶಗಳಿಗೆ ಒಳಗಾದರೆ ಅವರು ವಿವಿಧ ರೂಪದಲ್ಲಿ ಆರ್ಥಿಕ ಸಹಾಯ ಪಡೆಯಬಹುದು.

10ಲಕ್ಷ ಅಪಘಾತ ವಿಮೆ ಮಾಡಿಸುವುದು ಹೇಗೆ?

ಈಗಾಗಲೇ ನೀವು ಅಂಚೆ ಇಲಾಖೆಯಲ್ಲಿ ‘ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್’ ಖಾತೆ ಹೊಂದಿದ್ದರೆ ನೀವು ಈ ಅಪಘಾತ ವಿಮೆ ಮಾಡಿಸಲು ಅರ್ಹರಾಗುತ್ತೀರಿ. ಒಂದು ವೇಳೆ ಈ ಖಾತೆ ಹೊಂದಿರದಿದ್ದರೆ ಕೂಡಲೇ 100ರೂ. ಕಟ್ಟಿ ಹತ್ತಿರದ ಅಂಚೆ ಕಚೇರಿಯಲ್ಲಿ ಒಂದೇ ದಿನದಲ್ಲಿ ‘ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್’ ಖಾತೆ ತೆರೆಯಬಹುದು.

ಹೊಸದಾಗಿ ‘ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್’ ಖಾತೆ ತೆರೆಯುವವರು ಆಧಾರ ಮತ್ತು ಪ್ಯಾನ್ ಸಂಖ್ಯೆ ಸೇರಿದಂತೆ ಅಗತ್ಯ ದಾಖಲಾತಿ ಸಲ್ಲಿಕೆ ಕಡ್ಡಾಯವಾಗಿರುತ್ತದೆ. ನಂತರ ಖಾತೆಯಲ್ಲಿ ಕನಿಷ್ಠ 500 ರೂ.ಹಣ (ಡೆಪಾಸಿಟ್) ಇಡಬೇಕಿದೆ. ಬಳಿಕ ಅದೇ ಖಾತೆ ಮೂಲಕ ನೀವು 399 ರೂ. ಹಣ ಕಟ್ಟಿ 10ಲಕ್ಷ ರೂಪಾಯಿಯ ಅಪಘಾತ ವಿಮೆ ಮಾಡಿಸಬಹುದು. ಈ ಯೋಜನೆಯನ್ನು ಪ್ರತಿ ವರ್ಷ 399 ರೂ. ಪಾವತಿಸುವ ಮೂಲಕ ನವೀಕರಿಸಬೇಕು.

ವಿಮೆಯ ಪ್ರಯೋಜನ ಏನಿದೆ?

ವಿಮಾ ಯೋಜನೆ ಫಲಾನುಭವಿಯು ಆಕಸ್ಮಿಕ ಸಾವನ್ನಪ್ಪಿದರೆ ಅವರು ಕುಟುಂಬಸ್ಥರಿಗೆ ಹತ್ತು ಲಕ್ಷ ರೂ. ನೀಡಲಾಗುತ್ತದೆ. ಅಂದರೆ ಬಸ್, ಕಾರು ಇನ್ನಿತರ ಅಪಘಾತಗಳು, ಹಾವು ಕಡಿತ, ವಿದ್ಯುತ್ ಆಘಾತ, ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಸಾವು ಸೇರಿದಂತೆ ವಿವಿಧ ಆಕಸ್ಮಿಕವಾಗಿ ಸಾವು ಸಂಭವಿಸಿದರೆ ಪರಿಹಾರ ಪಡೆಯಬಹುದು. ಇದರ ಪೂರ್ತಿ ಮಾಹಿತಿ ಈ ಕೆಳಗಿನಂತಿದೆ.

* ಅಪಘಾತದಿಂದ ಮರ ಹೊಂದಿದಲ್ಲಿ 10ಲಕ್ಷ ರೂ. ಆರ್ಥಿಕ ಸಹಾಯ.

* ಶಾಸ್ವತವಾಗಿ ಅಂಗವೈಕಲ್ಯವಾದರೆ 10ಲಕ್ಷ ರೂ. ಆರ್ಥಿಕ ಸಹಾಯ.

* ಆಸ್ಪತ್ರೆ ವೆಚ್ಚಕ್ಕಾಗಿ 60,000 ರೂ. ಹಣಕ್ಕೆ ಅರ್ಹ.

* ಮೃತರ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಮಗುವಿಗೆ ರೂ.1 ಲಕ್ಷ ವರೆಗೆ ಸಹಾಯ (ಸಂಪೂರ್ಣ ಶಿಕ್ಷಣಕ್ಕೆ ಗರಿಷ್ಠ 2ಲಕ್ಷ ರೂ.).

* ಓಪಿಡಿ ವೆಚ್ಚಕ್ಕೆಂದು 30,000 ಸಾವಿರ ರೂ.ಹಣ

* ಅಪಘಾತದಲ್ಲಿ ಪಾರ್ಶ್ವವಾಯು ಉಂಟಾದರೆ 10ಲಕ್ಷ ರೂ. ನೀಡಿಕೆ

* ಕುಟುಂಬದ ಆಸ್ಪತ್ರೆ ಪ್ರಯಾಣ ವೆಚ್ಚಕ್ಕೆ 25,000 ರೂ. ಸಹಾಯ.

ಆಸಕ್ತರು ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್ ಖಾತೆ ತೆರೆಯಲು, ಈ ವಿಮಾ ಯೋಜನೆಯ ಲಾಭ ಪಡೆದುಕೊಳ್ಳಲು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ