ಸರಕಾರ ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಸಲು ಆಯೋಜಿಸಿರುವ ಸಭೆಯನ್ನು ಬೆಳಗಾವಿಯ ಸುವರ್ಣಸೌಧದಲ್ಲಿಯೇ ನಡೆಸಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿ ನೇಗಿಲಯೋಗಿ ರೈತ ಸೇವಾ ಸಂಘದಿAದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಲಿಸಲಾಯಿತು.
ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಕಬ್ಬಿನ ಕಾರ್ಖಾನೆಗಳಿವೆ. ಇಲ್ಲಿ ಕಬ್ಬು ಬೆಳೆಗಾರ ರೈತರ ಸಂಖ್ಯೆಯೂ ಹೆಚ್ಚಾಗಿದೆ. ಈ ಕುರಿತು ಕಬ್ಬು ಬೆಳೆಗಾರ ರೈತರ ಸಮಸ್ಯೆಗಳನ್ನು ಕುರಿತಂತೆ ಚರ್ಚೆಯನ್ನು ನಡೆಸಲು ಸಕ್ಕರೆ ಸಚಿವರು, ಆಯುಕ್ತರು, ಹಾಗೂ ಎಲ್ಲಾ ಕಾರ್ಖಾನೆಗಳ ಎಂಡಿಗಳು, ಹಾಗೂ ಎಲ್ಲಾ ಸಂಬAಧಿಸಿದ ಅಧಿಕಾರಿಳನ್ನು ಸೇರಿಸಿ ಕಬ್ಬಿನ ಬೆಲೆ ನಿರ್ಧಾರ ಕುರಿತಂತೆ ಒಂದು ಪೂರ್ವಭಾವಿ ಸಭೆಯನ್ನು ನಡೆಸಬೇಕು.
ಈ ಸಭೆಯನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿಯೇ ನಡೆಸಬೇಕು. ಬೆಂಗಳೂರಿನಲ್ಲಿ ಸಭೆಯನ್ನು ಮಾಡುತ್ತಿರುವುದರಿಂದ ಕೆಲ ರೈತ ಮುಖಂಡರಿಗೆ ಹೋಗಿ ಬರುವುದು ಕಷ್ಟಸಾಧ್ಯವಾಗುತ್ತಿದೆ. ಹಾಗಾಗಿ ಈ ಸಭೆಯನ್ನು ಬೆಳಗಾವಿಯಲ್ಲಿಯೇ ನಡೆಸಬೇಕೆಂದು ಒತ್ತಾಯಿಸಿ ಇಂದು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನೇಗಿಲಯೋಗಿ ರೈತ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ರವಿ ಪಾಟಿಲ್‌ರವರು, ಸಕ್ಕರೆ ಸಚಿವರು ಹಾಗೂ ಕಮಿಶನರ್‌ರವರು ಬೆಂಗಳೂರಿನಲ್ಲಿ ರೈತರ ಸಭೆಯನ್ನು ಕರೆದಿದ್ದಾರೆ. ಬೆಳಗಾವಿಯಿಂದ ೧೧ ಜನರನ್ನು ಮಾತ್ರೆ ಹಾಕಿದ್ದಾರೆ. ಬೆಳಗಾವಿಯಲ್ಲಿ ಸಕ್ಕರೆ ಬೆಳೆಗಾರ ರೈತರೂ ಹಾಗೂ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಬೆಳಗಾವಿಯ ಸುವರ್ಣ ಸೌಧ ಖಾಲಿ ಇದೆ.
ಹಾಗಾಗಿ ಬೆಳಗಾವಿಯಲ್ಲಿಯೇ ಈ ಸಭೆಯನ್ನು ಮಾಡಿ ಕಬ್ಬಿನ ಬೆಲೆಯನ್ನು ನಿಗದಿ ಮಾಡಬೇಕು. ಇಲ್ಲವಾದರೆ ಈ ಹೋರಾಟ ಮಾತ್ರ ನಿರಂತರವಾಗಿ ಮುಂದುವರೆಯುತ್ತದೆ. ಕಾರ್ಖಾನೆಗಳಿಗೆ ಕಬ್ಬಿನಿಂದ ವಿವಿಧ ಲಾಭಗಳಿವೆ. ಮತ್ತು ತೂಕದಲ್ಲಿ ಕೂಡ ಕಾರ್ಖಾನೆಗಳು ರೈತರಿಗೆ ಮೋಸ ಮಾಡುತ್ತವೆ. ಹಾಗಾಗಿ ಸರಕಾರ ಕಬ್ಬಿನ ಬೆಲೆಯನ್ನು ಕನಿಷ್ಠ ೪೫೦೦ರೂವನ್ನು ನಿಗದಿ ಮಾಡುವ ಕೆಲಸವಾಗಬೇಕೆಂದು ಆಗ್ರಹಿಸಿದರು.