Breaking News

ಕರ್ನಾಟಕವನ್ನು ಕಾಂಗ್ರೆಸ್​​​​ನವರು ಎಟಿಎಂ ಮಾಡಿಕೊಂಡಿದ್ದರು : ಸಿಎಂ ಬೊಮ್ಮಾಯಿ ವಾಗ್ದಾಳಿ

Spread the love

ವಿಜಯನಗರ : ಬಿಜೆಪಿಯವರು ಕಪ್ಪ ಕಾಣಿಕೆ ಕೊಡುತ್ತಾರೆಂದು ಕಾಂಗ್ರೆಸ್ ಹೇಳುತ್ತದೆ. ಆದರೆ, ಕಾಂಗ್ರೆಸ್ಸಿಗೆ ಕಪ್ಪ ಕಾಣಿಕೆ ಕೊಟ್ಟು ಅಭ್ಯಾಸವಾಗಿದೆ. ಕಪ್ಪು ಕಾಣಿಕೆ ಕೊಡುವ ಸಂಪ್ರದಾಯ, ಇತಿಹಾಸ ಕಾಂಗ್ರೆಸ್ ಗೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಕರ್ನಾಟಕವನ್ನು ಕಾಂಗ್ರೆಸ್ಸಿನವರು ಎಟಿಎಂ ಮಾಡಿಕೊಂಡಿದ್ದರು : ಹೂವಿನಹಡಗಲಿಯಲ್ಲಿ ಜಿ.ಬಿ.ಆರ್. ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ಗೆ ಕರ್ನಾಟಕ ಐದು ವರ್ಷ ಕಪ್ಪ ಕಾಣಿಕೆ ಕೊಡುವ ಎಟಿಎಂ ಆಗಿತ್ತು. ಯಾವುದೇ ರಾಜ್ಯದ ಚುನಾವಣೆ ಇದ್ದರೂ ಕರ್ನಾಟಕದಿಂದ ಹಣ ಕೊಡುತ್ತಿದ್ದರು. ಕರ್ನಾಟಕವನ್ನು ಕಾಂಗ್ರೆಸ್ಸಿನವರು ಎಟಿಎಂ ಮಾಡಿಕೊಂಡಿದ್ದರು ಎಂದು ವಾಗ್ದಾಳಿ ನಡೆಸಿದರು.

ಹಡಗಲಿಯ ಸಿಂಗಟಲೂರು ಏತನೀರಾವರಿ ಯೋಜನೆ ಅನುಷ್ಠಾನ ಮಾಡಿದ್ದೇವೆ. ರಾಜ್ಯಗಳ ತಾಂಡಾ ಅಭಿವೃದ್ಧಿ ನಿಗಮ ಮಾಡಿದ್ದು ಯಡಿಯೂರಪ್ಪ ಸರ್ಕಾರ, ತಾಂಡಾ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಅನುದಾನ ಕೊಟ್ಟಿದ್ದೇವೆ. ಪ್ರಗತಿ ನಿರಂತರವಾಗಿ ನಡೆಯಬೇಕು ಎಂದು ಜನಾಂಗದ ಜನರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಅಧಿಕಾರವಿದ್ದಾಗ ಕಾಂಗ್ರೆಸ್ ಏನು ಮಾಡಿದೆ. ಮೂಗಿಗೆ ತುಪ್ಪ ಹಚ್ಚೋ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸುಳ್ಳು ಆಶ್ವಾಸನೆ ಕೊಟ್ವವರು ಮತ್ತೆ ಬರುತ್ತಿದ್ದಾರೆ : ಬಳ್ಳಾರಿ ಸೋನಿಯಾ ಗಾಂಧಿಗೆ ಆಶೀರ್ವಾದ ಮಾಡಿತ್ತು. ಬಳ್ಳಾರಿ ಸ್ಥಾನ ಉಳಿಸಿಕೊಳ್ಳಬೇಕೆಂದು ಈ ಭಾಗದ ಜನರ ನಿರೀಕ್ಷೆ ಇತ್ತು. ಚುನಾವಣೆಯಲ್ಲಿ ಬಳ್ಳಾರಿ ತವರು ಮನೆ ಅಂದರು. ಆದರೆ ಕೈಕೊಟ್ಟು ರಾಜೀನಾಮೆ ನೀಡಿ ಉತ್ತರ ಪ್ರದೇಶಕ್ಕೆ ಹೋದರು. ಮೂರು ಸಾವಿರ ಕೋಟಿ ಪ್ಯಾಕೇಜ್ ಕೊಡುತ್ತೇನೆ ಅಂದರು. ಏನಾಯ್ತು? ಸುಳ್ಳು ಆಶ್ವಾಸನೆ ಕೊಟ್ಟವರು ಈಗ ಮತ್ತೆ ಬರುತ್ತಿದ್ದಾರೆ. ಅಮ್ಮ ಅಯ್ತು ಇದೀಗ ಮಗ ಮತ್ತೊಂದು ಸುಳ್ಳು ಹೇಳೋಕೆ ಬರುತ್ತಿದ್ದಾರೆ ಎಂದು ಟೀಕಿಸಿದರು.

ಯಾವ ಮುಖ ಇಟ್ಟುಕೊಂಡು ಬಳ್ಳಾರಿಗೆ ಬರುತ್ತಾರೋ ಗೊತ್ತಿಲ್ಲ ಕಾಂಗ್ರೆಸ್ ಭ್ರಷ್ಟಾಚಾರದಿಂದಲೇ ಕರ್ನಾಟಕಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.


Spread the love

About Laxminews 24x7

Check Also

RSS ಬಿಸಿಬಿಸಿ ಚರ್ಚೆಗೆ ತುಪ್ಪ ಸುರಿದು ವಿವಾದದ ಕಿಡಿ ಹೊತ್ತಿಸಿದ ಸಚಿವ ಶಿವರಾಜ್ ತಂಗಡಗಿ

Spread the loveಕೊಪ್ಪಳ, (ಅಕ್ಟೋಬರ್ 18): ಸಾರ್ವಜನಿಕ ಸ್ಥಳಗಳಲ್ಲಿ ಆರ್​ ಎಸ್​ಎಸ್​  (RSS) ಕಾರ್ಯಚಟುವಟಿಕೆಗಳಿಗೆ ನಿರ್ಬಂಧಿಸುವ ಬಗ್ಗೆ ಕಾಂಗ್ರೆಸ್, ಬಿಜೆಪಿ ಹಾಗೂ ಹಿಂದೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ