ಕಳೆದ ಎರಡ್ಮೂರು ದಿನಗಳಿಂದ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಕಷ್ಟ ಪಟ್ಟು ಬೆಳೆದ ವಿವಿಧ ಬೆಳೆಗಳ ಹಾನಿಯಾಗುವ ಭೀತಿಯನ್ನು ರೈತರು ಅನುಭವಿಸುತ್ತಿದ್ದಾರೆ.
ಹೌದು ಹಲಗಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರಿ ಮಳೆಯಿಂದ ಬೆಳೆ ಹಾನಿ ಸಾಧ್ಯತೆಯಿದೆ. ಆಲೂಗಡ್ಡೆ, ಸೋಯಾಬೀನ್, ಬಾಸ್ಮತಿ ಭತ್ತ ಸೇರಿ ಇನ್ನಿತರ ಬೆಳೆಗಳು ಕಟಾವಿಗೆ ಬಂದಿವೆ. ಆದರೆ ಇದೀಗ ಬಿಟ್ಟು ಬಿಡದೇ ಮಳೆಯಾಗುತ್ತಿರುವ ಹಿನ್ನೆಲೆ ಕೈಯಿಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ರೈತರಿಗೆ ಬಂದೊದಗಿದೆ. ಸಧ್ಯ ಹೊಲದ ತುಂಬಾ ನೀರು ನಿಂತಿದ್ದ, ಬೆಳೆ ಹಾನಿ ಭೀತಿ ರೈತರನ್ನು ಕಾಡುತ್ತಿದೆ. ಮಳೆ ಸ್ವಲ್ಪ ರಿಲ್ಯಾಕ್ಸ ಕೊಟ್ಟು ಬಿಸಿಲು ಬಿದ್ದರೆ ಬೆಳೆಯನ್ನು ಕೊಯ್ಲು ಮಾಡಿಕೊಂಡು ಪಾರಾಗುತ್ತೇವೆ ಎಂದು ರೈತರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.