Breaking News

ಗೃಹ, ವಾಹನ ಸಾಲ ಬಡ್ಡಿದರ ಮತ್ತಷ್ಟು ಹೆಚ್ಚಳ: ರೆಪೋ ದರ ಮತ್ತೆ ಶೇ.0.50ರಷ್ಟು ಹೆಚ್ಚಳ

Spread the love

ವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ (ಸೆಪ್ಟೆಂಬರ್ 30) ಸತತ ನಾಲ್ಕನೇ ಬಾರಿಗೆ ಶೇ.05ರಷ್ಟು ರೆಪೋ ದರವನ್ನು ತಕ್ಷಣವೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿದ್ದು, ಇದರೊಂದಿಗೆ ರೆಪೋ ದರ ಶೇ.5.9ಕ್ಕೆ ಏರಿಕೆಯಾದಂತಾಗಿದೆ.

 

ಪ್ರಸಕ್ತ ಸಾಲಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನಾಲ್ಕನೇ ಬಾರಿಗೆ ರೆಪೋ ದರ ಹೆಚ್ಚಳ ಮಾಡಿದಂತಾಗಿದೆ. ರೆಪೋ ದರ ಹೆಚ್ಚಳದಿಂದ ಗೃಹ, ವಾಹನ ಸಾಲದ ಬಡ್ಡಿದರ ಮತ್ತಷ್ಟು ಏರಿಕೆಯಾಗಿದೆ.

ಕೋವಿಡ್ ಬಳಿಕ ಆರ್ ಬಿಐ ಮೇ ತಿಂಗಳಿನಲ್ಲಿ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್ಸ್ ಗಳಷ್ಟು ಹೆಚ್ಚಳ ಮಾಡಿದ್ದು, ರೆಪೋ ದರ ಶೇ.4.40ರಷ್ಟಿತ್ತು. ಬಳಿಕ ಜೂನ್ ನಲ್ಲಿ ಆರ್ ಬಿಐ ಮತ್ತೆ 50 ಬೇಸಿಸ್ ಪಾಯಿಂಟ್ಸ್ ಗಳಷ್ಟು ಏರಿಕೆ ಮಾಡುವ ಮೂಲಕ ಶೇ.4.90ಕ್ಕೆ ಏರಿಕೆಯಾಗಿತ್ತು. ಸೆಪ್ಟೆಂಬರ್ ನಲ್ಲಿ ಶೇ.5.4ರಷ್ಟಿದ್ದ ರೆಪೋ ದರ ಅಕ್ಟೋಬರ್ ನಲ್ಲಿ ಶೇ.5.9ಕ್ಕೆ ಹೆಚ್ಚಳವಾಗಿದೆ.


Spread the love

About Laxminews 24x7

Check Also

ನ್ಯಾಯಬೆಲೆ ಅಂಗಡಿಯಲ್ಲಿ QR ಸ್ಕ್ಯಾನ್ ಮೂಲಕ ಇಂದಿರಾ ಫುಡ್ ಕಿಟ್ ವಿತರಿಸಿ: ಸಿಎಂ

Spread the loveಬೆಂಗಳೂರು: ಪ್ರತೀ ನ್ಯಾಯಬೆಲೆ ಅಂಗಡಿಯಲ್ಲಿಯೂ ಸಹ ಕ್ಯೂಆರ್(ಕ್ವಿಕ್ ರೆಸ್ಪಾನ್ಸ್) ಸ್ಕ್ಯಾನ್ ಮಾಡಬಹುದಾದ ತಂತ್ರಾಂಶವನ್ನು ಅಳವಡಿಸಿ ಅದರ ಆಧಾರದ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ