ಚಾಮರಾಜನಗರ: ಭಾರತ್ ಜೋಡೋ ಯಾತ್ರೆ ಹುಚ್ಚರ ಜಾತ್ರೆ ಆಗಿದೆ. ಇದೊಂದು ಹುಚ್ಚನ ಮದುವೆ ಇದ್ದಂತೆ ಎಂದು ಗುಂಡ್ಲುಪೇಟೆ ಬಿಜೆಪಿ ಶಾಸಕ ಸಿ.ಎಸ್.ನಿರಂಜನ ಕುಮಾರ್ ಲೇವಡಿ ಮಾಡಿದ್ದಾರೆ.
ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರಿಗೆ ಈಗ ಫೇಸ್ ವ್ಯಾಲ್ಯೂ ಇಲ್ಲ. ಜನರಿಗೆ ಈಗಾಗಲೇ ಅವರ ಕ್ಷಮತೆ ಬಗ್ಗೆ ಅರ್ಥವಾಗಿದೆ. ಇವರ ಕೈಯಲ್ಲಿ ದೇಶ ನಡೆಸಲು ಆಗ್ತಾ ಇಲ್ಲ ಎಂಬುದು ಗೊತ್ತಾಗಿದೆ. ಅವರ ಯಾತ್ರೆಯಿಂದ ಬಿಜೆಪಿಗೆ ಯಾವುದೇ ರೀತಿ ನಷ್ಟ ಇಲ್ಲ ಎಂದು ಕಿಡಿಕಾರಿದರು.