Breaking News
Home / ರಾಜಕೀಯ / ಹೃದಯ ವೈಫಲ್ಯ ಪತ್ತೆಗೆ ಹೊಸ ತಂತ್ರಜ್ಞಾನ: 8 ನಿಮಿಷ ಸಾಕು !

ಹೃದಯ ವೈಫಲ್ಯ ಪತ್ತೆಗೆ ಹೊಸ ತಂತ್ರಜ್ಞಾನ: 8 ನಿಮಿಷ ಸಾಕು !

Spread the love

ಲಂಡನ್ : ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ವಿನೂತನ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಇದು ಮಾನವನ ಹೃದಯ ವೈಫಲ್ಯವನ್ನು ತ್ವರಿತವಾಗಿ ಪತ್ತೆ ಮಾಡುತ್ತದೆ.

ಸಾಂಪ್ರದಾಯಿಕ ಎಂಆರ್‌ಐ ಮೂಲಕ ಹೃದ್ರೋಗವನ್ನು ಪತ್ತೆಹಚ್ಚಲು 20 ನಿಮಿಷಗಳನ್ನು ತೆಗೆದುಕೊಂಡರೆ, ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಇತ್ತೀಚಿನ ತಂತ್ರಜ್ಞಾವು ಈ ಪ್ರಕ್ರಿಯೆಯನ್ನು ಕೇವಲ 8 ನಿಮಿಷಗಳಲ್ಲಿ ಪೂರ್ಣಗೊಳಿಸುತ್ತದೆ ಎಂದು ಸಂಶೋಧಕ ಹೊಸಮಾದಿನ್ ಅಸಾದಿ ಬಹಿರಂಗಪಡಿಸಿದ್ದಾರೆ.

ಎಂಆರ್​ಐ ತಂತ್ರಜ್ಞಾನವನ್ನು ಬಳಸಿಕೊಂಡು ನಾವು ಹೃದಯ ರಕ್ತದ ಹರಿವಿನ 4-ಆಯಾಮದ (4-D) ಚಿತ್ರಗಳನ್ನು ಅಭಿವೃದ್ಧಿಪಡಿಸಿದ್ದೇವೆ. ‘ಫೋರ್ಡಿ ಫ್ಲೋ MRI’ ಎಂದು ಕರೆಯಲ್ಪಡುವ ಈ ತಂತ್ರಜ್ಞಾನವು ಹೃದಯ ಕವಾಟಗಳು ಮತ್ತು ರಕ್ತದ ಹರಿವಿನ ಅತ್ಯಂತ ನಿಖರವಾದ ಚಿತ್ರಗಳನ್ನು ಒದಗಿಸುತ್ತದೆ. ಇದರಿಂದ ಸಮಸ್ಯೆಯನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಆ ಮೂಲಕ ತ್ವರಿತವಾಗಿ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಯುರೋಪಿಯನ್ ಜರ್ನಲ್ ಆಫ್ ಎಕ್ಸ್‌ಪರಿಮೆಂಟಲ್ ರೇಡಿಯಾಲಜಿಯಲ್ಲಿ ಈ ವಿವರಗಳು ಪ್ರಕಟವಾಗಿವೆ.


Spread the love

About Laxminews 24x7

Check Also

ಬಂಗಾರ ದರ ಮತ್ತೆ ಇಳಿಕೆ

Spread the love 26: ಬಂಗಾರ ದರ ನಿನ್ನೆಗೆ ಅಂದರೆ ಜೂನ್‌ 25ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್‌ 24) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ