Breaking News
Home / Uncategorized / ಕಾರಲ್ಲಿ ಅತ್ಯಾಚಾರ, ವಿಷ ಕುಡಿದು ಆತ್ಮಹತ್ಯೆ ಯತ್ನ.. ಇದು ಲವ್​, ಸೆಕ್ಸ್​, ದೋಖಾ ಸ್ಟೋರಿ

ಕಾರಲ್ಲಿ ಅತ್ಯಾಚಾರ, ವಿಷ ಕುಡಿದು ಆತ್ಮಹತ್ಯೆ ಯತ್ನ.. ಇದು ಲವ್​, ಸೆಕ್ಸ್​, ದೋಖಾ ಸ್ಟೋರಿ

Spread the love

ಠಾಣೆ (ಮಹಾರಾಷ್ಟ್ರ): ಇಲ್ಲಿನ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವತಿಯ ಜೀವನದಲ್ಲಿ ಲವ್ ಸೆಕ್ಸ್ ದೋಖಾ ಹಿಂದಿ ಚಲನಚಿತ್ರದ ರೀತಿಯಲ್ಲಿ ಘಟನೆಗಳು ಘಟಿಸಿದ್ದು ಅಚ್ಚರಿಯಾದರೂ ನಿಜ. ಈ ಯುವತಿಯು ಒಬ್ಬಾತನ ಪ್ರೀತಿಯ ಬಲೆಗೆ ಬಿದ್ದಿದ್ದಳು.

ಪ್ರೀತಿಯ ನಾಟಕವಾಡುತ್ತಲೇ ಆತ ಅನೇಕ ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಆದರೆ, ಇದೆಲ್ಲ ಸಾಕು ನಾವಿನ್ನು ಲಗ್ನವಾಗೋಣ ಎಂದಾಗ ಮಾತ್ರ ಆತ ತನ್ನ ಅಸಲಿ ಬಣ್ಣ ತೋರಿಸಲಾರಂಭಿಸಿದ್ದ. ಹೀಗಾಗಿ ಯುವತಿಯು ಬೇರೆ ದಾರಿ ಕಾಣದೇ ಆನ್ಲೈನ್ ಮೂಲಕ ವಿಷ ತರಿಸಿ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು.

ಈ ಪ್ರಕರಣ ಬದಲಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಮುಂದಾಗಿದ್ದಾರೆ. ಮಹೇಂದ್ರ ವಸಂತ ಭೋಯಿರ್ ಈತನೇ ಯುವತಿಗೆ ವಂಚಿಸಿದ ಯುವಕನಾಗಿದ್ದಾನೆ.

ಸಂತ್ರಸ್ತೆಯು ಕಳೆದ 5 ತಿಂಗಳಿಂದ ಬದಲಾಪೂರ ಪೂರ್ವ ಭಾಗದ ಖರವಾಯಿ ಎಂಬಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದಳು. ಆದರೆ, ಇದಕ್ಕೂ ಮುನ್ನ ಆಕೆ ಉಲ್ಹಾಸ ನಗರದ ಮಾಣೇರೆ ಗ್ರಾಮದಲ್ಲಿ ವಾಸಿಸುತ್ತಿದ್ದು, 2017 ರಲ್ಲಿ ಅದೇ ಪರಿಸರದಲ್ಲಿ ವಾಸಿಸುತ್ತಿದ್ದ ಮಹೇಂದ್ರನೊಂದಿಗೆ ಆಕೆಯ ದೋಸ್ತಿ ಆಗಿತ್ತು. ವರ್ಷ ಕಳೆಯುವಷ್ಟರಲ್ಲಿ ಇವರ ದೋಸ್ತಿ ಲವ್ ಆಗಿ ಬದಲಾಗಿತ್ತು. ಆದರೆ, ಪ್ರೇಮದ ಹೆಸರಲ್ಲಿ ಆತ ಕಿರುಕುಳ ನೀಡಿದ್ದರಿಂದ ಅವಳು ಆತನೊಂದಿಗೆ ಮಾತು ನಿಲ್ಲಿಸಿದ್ದಳು.

ಹೆಚ್ಚೂಕಡಿಮೆ ಎರಡು ವರ್ಷ ಇಬ್ಬರ ಮಧ್ಯೆ ಯಾವುದೇ ಮಾತುಕತೆ ಇರಲಿಲ್ಲ. ಇದಾದ ನಂತರ ಅದು ಹೇಗೋ ಇಬ್ಬರ ಮಧ್ಯೆ ಸಂಪರ್ಕ ಏರ್ಪಟ್ಟಿತ್ತು. ಈ ಮಧ್ಯೆ 2022ರ ಏಪ್ರಿಲ್​ನಲ್ಲಿ ಒಂದು ದಿನ ಯುವಕ ಆಕೆಯನ್ನು ಸುತ್ತಾಡಿಸುವ ನೆಪದಲ್ಲಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ.

ಘಟನೆಯಿಂದ ಆತಂಕಕ್ಕೊಳಗಾದ ಯುವತಿಗೆ ಸಮಾಧಾನ ಮಾಡಿದ್ದ ಆತ, ಲಗ್ನ ಮಾಡಿಕೊಳ್ಳುವ ಭರವಸೆ ನೀಡಿದ್ದ. ಇದರ ನಂತರ ಮೇ 2022 ರಿಂದ ಸೆಪ್ಟೆಂಬರ್ 2022ರ ಮಧ್ಯೆ ಯಾವ್ಯಾವುದೋ ನೆಪದಲ್ಲಿ ಅವಳನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ.

ನಂತರ ಅವಳೊಂದಿಗೆ ಮಾತು ನಿಲ್ಲಿಸಿ, ಆಕೆಯ ಮೊಬೈಲ್ ಸಂಖ್ಯೆ ಬ್ಲಾಕ್ ಮಾಡಿದ್ದ. ಇದರಿಂದ ನೊಂದ ಯುವತಿ ಸಾಯುವ ನಿರ್ಧಾರ ಮಾಡಿ, ಗೂಗಲ್​ನಲ್ಲಿ ಹುಡುಕಾಡಿ 50 ಗ್ರಾಂ ವಿಷ ಆರ್ಡರ್ ಮಾಡಿ ತರಿಸಿಕೊಂಡು ಅದನ್ನು ಸೇವಿಸಿದ್ದಳು.


Spread the love

About Laxminews 24x7

Check Also

ಪಂಚಾಯತ್‌ಗಳ ಬಲವರ್ಧನೆಗೆ ರಾಜ್ಯ ಸರಕಾರ ಚಿತ್ತ ಹರಿಸಲಿ

Spread the love ರಾಜ್ಯದಲ್ಲಿ ಜುಲೈ ಒಂದರಿಂದ ಅನ್ವಯವಾಗುವಂತೆ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಗ್ರಾಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ