Breaking News

ಸಾಲದ ಸುಳಿಯಲ್ಲಿ ಬಿಎಂಟಿಸಿ ನಿಗಮ : ಶ್ರೀರಾಮುಲು

Spread the love

ಬೆಂಗಳೂರು: ಬಿಎಂಟಿಸಿ (BMTC) ನಿಗಮ ಸಾಲದ ಸುಳಿಯಲ್ಲಿ ಸಿಲುಕಿದೆ ಅಂತ ಖುದ್ದು ಸಾರಿಗೆ ಸಚಿವ ಶ್ರೀರಾಮುಲು (Sriramulu) ಒಪ್ಪಿಕೊಂಡಿದ್ದಾರೆ.

ವಿಧಾನ ಪರಿಷತ್ (Vidhan Parishad) ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಗೋವಿಂದ್ ರಾಜು (Govida Raju) ಬದಲಾವಣೆ ಯುಬಿ ವೆಂಕಟೇಶ ಬಿಎಂಟಿಸಿ ಸಾಲದ ಬಗ್ಗೆ ಪ್ರಶ್ನೆ ಕೇಳಿದರು. ಪ್ರಶ್ನೆಗೆ ಉತ್ತರ ನೀಡಿದ ಸಾರಿಗೆ ಶ್ರೀರಾಮುಲು ಅವರು, 5 ವರ್ಷಗಳಲ್ಲಿ ಬಿಎಂಟಿಸಿ 1,324 ಕೋಟಿ ಸಾಲ ಮಾಡಿದೆ. ಸಾಲವನ್ನು ಬಸ್ ಖರೀದಿ, ಭವಿಷ್ಯ ನಿಧಿ ಬಳಕೆ, ಸಂಸ್ಥೆ ಕಾಮಗಾರಿಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಅಂತ ತಿಳಿಸಿದರು.

ಈ ಸಾಲದಲ್ಲಿ ಈಗಾಗಲೇ 679 ಕೋಟಿ ಸಾಲ ತೀರಿಸಲಾಗಿದೆ. ಉಳಿದ ಸಾಲ ಸರ್ಕಾರದಿಂದ ನಮಗೆ ಸಾಲ ಬರಬೇಕು. ಸರ್ಕಾರ ಅನುದಾನ ಕೊಟ್ಟ ಬಳಿಕ ಸಾಲ ತೀರಿಸುತ್ತೇವೆ. ಸರ್ಕಾರ ಮಕ್ಕಳು, ಕಾರ್ಮಿಕರ ಬಸ್ ಪಾಸ್ ಹಣ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಈ ಹಣ ಬಂದ ಕೂಡಲೇ ಸಾಲ ತೀರಿಸಲಾಗುತ್ತದೆ ಎಂದು ಹೇಳಿದರು.ಸಾರಿಗೆ ಇಲಾಖೆ ಲಾಭಕ್ಕೆ ತರಲು ಕ್ರಮಗಳು ಆಗುತ್ತಿದೆ. ಇದಕ್ಕಾಗಿ ಶ್ರೀನಿವಾಸಮೂರ್ತಿ ಸಮಿತಿ ವರದಿ ಬಂದಿದೆ. ವರದಿ ಅನ್ವಯ ಕ್ರಮ ತೆಗೆದುಕೊಳ್ಳುತ್ತೇವೆ ಅಂದರು. ಈ ವೇಳೆ ಕಾಂಗ್ರೆಸ್‍ನ ಪ್ರಕಾಶ್ ಹುಕ್ಕೇರಿ, ಕೋವಿಡ್‍ನಿಂದ ಅನೇಕ ಕಡೆ ಬಸ್ ನಿಲ್ಲಿಸಲಾಗಿದೆ. ನಿಲ್ಲಿಸಿರುವ ಬಸ್ ಬಿಡುಗಡೆ ಮಾಡಿ ಅಂತ ಮನವಿ ಮಾಡಿದರು. 


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ