Breaking News

ಹುಬ್ಬಳ್ಳಿ: ಇದು ಎರಡು ನಾಯಿಗಳ ಕಥೆ; ರಕ್ತದಾನ ಮಾಡಿ ಮಾಯಾಳ ಜೀವ ಉಳಿಸಿದ ಚಾರ್ಲಿ!

Spread the love

ಹುಬ್ಬಳ್ಳಿ: ಸಮಯೋಚಿತ ಸಹಾಯವು ಜೀವಗಳನ್ನು ಉಳಿಸುತ್ತದೆ. ಅಂತಹ ಒಂದು ಘಟನೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ವರದಿಯಾಗಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಡಾಗ್ ಆಗಿ ಕಾರ್ಯನಿರ್ವಹಿಸುತ್ತಿರುವ ಬೆಲ್ಜಿಯಂ ಶೆಫರ್ಡ್ ಅಸ್ವಸ್ಥ ನಾಯಿ ಮಾಯಾಳ ಜೀವ ಉಳಿಸಲು ಜರ್ಮನ್ ಶೆಫರ್ಡ್ ಚಾರ್ಲಿ ರಕ್ತದಾನ ಮಾಡಿದ್ದಾನೆ.

ಈಗ ಮಾಯಾ ಚೇತರಿಸಿಕೊಂಡಿದ್ದು, ವಾರದೊಳಗೆ ಮತ್ತೆ ಏರ್‌ಪೋರ್ಟ್ ಡ್ಯೂಟಿಗೆ ಹಾಜರಾಗಲಿದ್ದಾಳೆ.

ಇದು ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳ ಎರಡು ನಾಯಿಗಳ ಕಥೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 15 ತಿಂಗಳ ವಯಸ್ಸಿನ ಸ್ನಿಫರ್ ಡಾಗ್ ಮಾಯಾ, ಜ್ವರ, ರಕ್ತಸ್ರಾವ, ಹಸಿವಾಗದಿರುವುದು ಮತ್ತು ಆಲಸ್ಯವನ್ನು ಉಂಟುಮಾಡುವ ಬ್ಯಾಕ್ಟೀರಿಯಾ ಕಾಯಿಲೆ ಎರ್ಲಿಚಿಯಾದಿಂದ ಬಳಲುತ್ತಿತ್ತು. ಈ ನಾಯಿಯ ಜೀವ ಉಳಿಸಲು ಸಮಯೋಚಿತ ಚಿಕಿತ್ಸೆಯ ಅಗತ್ಯವಿತ್ತು.

ಮಾಯಾಳಿಗೆ ಚಿಕಿತ್ಸೆ ಕೊಡಿಸಲು ವಿಮಾನ ನಿಲ್ದಾಣದ ಸಿಬ್ಬಂದಿ ಕಳೆದ ಐದಾರು ದಿನಗಳಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯ (ಯುಎಎಸ್) ಆವರಣದಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಕಳೆದ ಐದಾರು ದಿನಗಳಿಂದ ಆಕೆಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಮತ್ತು ಅದರ ದೇಹದಲ್ಲಿ ರಕ್ತಸ್ರಾವವಾಗಲು ಪ್ರಾರಂಭವಾಯಿತು.

ಮತ್ತೆ ಭಾನುವಾರ ವಿಮಾನ ನಿಲ್ದಾಣದ ಸಿಬ್ಬಂದಿ ಧಾರವಾಡದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಭೇಟಿ ನೀಡಿದ್ದರು. ಈ ವೇಳೆ ವೈದ್ಯರು ಮಾಯಾಳಿಗೆ ರಕ್ತ ಹಾಕಲು ನಿರ್ಧರಿಸಿದ್ದಾರೆ. ಆದರೆ ಮಾಯಾಳ ರಕ್ತದ ಗುಂಪಿಗೆ ಹೊಂದಿಕೆಯಾಗುವ ರಕ್ತವನ್ನು ದಾನ ಮಾಡುವ ನಾಯಿಯನ್ನು ಹುಡುಕುವುದು ಅವರಿಗೆ ದೊಡ್ಡ ಸವಾಲಾಗಿತ್ತು. ನಾಯಿಗಳಲ್ಲಿ ಎಂಟು ವಿಧದ ರಕ್ತದ ಗುಂಪುಗಳಿದ್ದು, ದಾನಿಯನ್ನು ಹುಡುಕುವುದು ಅಷ್ಟು ಸುಲಭವಲ್ಲ.


Spread the love

About Laxminews 24x7

Check Also

ಪುರುಷರಿಗೆ ಸಾರಿಗೆ ಬಸ್ ಗಳಲ್ಲಿ ‘ಉಚಿತ ಪ್ರಯಾಣ’ ಪ್ರಸ್ತಾವನೆ ಸದ್ಯಕ್ಕೆ ಇಲ್ಲ : ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

Spread the love ಹುಬ್ಬಳ್ಳಿ : ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ನಿನ್ನೆ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಕ್ಕಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ