ಬಿಜೆಪಿ ಜನಸ್ಪಂದನೆ ಸಮಾವೇಶದಲ್ಲಿ ಲಕ್ಷಾಂತರ ಜನ ಎಂದು ಖಾಲಿ ಕುರ್ಚಿಗಳಿಗೆ ಕೇಂದ್ರ ಸಚಿವೆ ಸ್ಮøತಿ ಇರಾನಿ, ಮಾಜಿ ಸಿಎಂ ಬಿಎಸ್‍ವೈ, ಸಿಎಂ ಬೊಮ್ಮಾಯಿ ಅಡ್ರೆಸ್ ಮಾಡಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ವ್ಯಂಗ್ಯವಾಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್ ಬಿಜೆಪಿ ಜನಸ್ಪಂದನೆ ಸಮಾವೇಶದಲ್ಲಿ ಖಾಲಿ ಕುರ್ಚಿ ಇರುವ ವಿಡಿಯೋ ನನ್ನ ಬಳಿ ಇವೆ. ನಿಮ್ಮ ಕಡೆಗೆ ವಿಡಿಯೋ ಇಲ್ಲಾ ಅಂದ್ರೆ ಹೇಳಿ ನಾನು ಕೊಡ್ತೀನಿ. ಖಾಲಿ ಕುರ್ಚಿಗಳಿಗೆ ಲಕ್ಷಾಂತರ ಜನ ಎಂದು ಹೇಳಿದ್ದಾರೆ ಲೇವಡಿ ಮಾಡಿದರು.