ನೇಮಕಾತಿ ಅಕ್ರಮದ ವಾಸನೆ ಎಲ್ಲೆಡೆಯೂ ಹರಡುತ್ತಿದೆ. ರಾಜ್ಯ ಸರ್ಕಾರದ ಬಹುತೇಕ ಹುದ್ದೆಗಳಲ್ಲಿ ಅಕ್ರಮ ನಡೆದಿದ್ದು, ತನಿಖೆ ಕೂಡ ನಡೆಯುತ್ತಿರುವ ಬೆನ್ನಲ್ಲೇ ಈಗ ರೈಲ್ವೆ ಇಲಾಖೆಯಲ್ಲೊಂದು ಗಂಭೀರ ಆರೋಪ ಕೇಳಿ ಬಂದಿದೆ.
ಹೀಗೆ ರೈಲ್ವೆ ಪರೀಕ್ಷೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ರೈಲ್ವೆ ಸಿಬ್ಬಂದಿ. ಮರು ಪರೀಕ್ಷೆಗೆ ಒತ್ತಾಯಿಸುತ್ತಿರುವ ಅಭ್ಯರ್ಥಿಗಳು. ದೊಡ್ಡಮಟ್ಟದ ಅಕ್ರಮ ನಡೆದಿದೆ ಎಂದು ಅಸಮಾಧಾನಗೊಂಡ ಸಿಬ್ಬಂದಿ. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ಹುಬ್ಬಳ್ಳಿ ರೈಲ್ವೆ ವ್ಯವಸ್ಥಾಪಕ ನಿರ್ದೇಶಕರ ಕಚೇರಿ. ಹೌದು.. ರೈಲ್ವೆಯ ಗೂಡ್ಸ್ ಟ್ರೈನ್ ಮ್ಯಾನೇಜರ್ ಸಿಇಟಿಯ ಪ್ರಶ್ನೆಪತ್ರಿಕೆ ಬಹಿರಂಗ ಆರೋಪ ಗಂಭೀರವಾಗಿ ಕೇಳಿಬಂದಿದೆ.ಜಿ.ಟಿ.ಎಂ. ಪರೀಕ್ಷಾರ್ಥಿಗಳು ಹುಬ್ಬಳ್ಳಿಯ ನೈರುತ್ಯ ರೈಲ್ವೆ ಜಿ.ಎಂ. ಕಛೇರಿ ಬಳಿ ಹೋರಾಟ ನಡೆಸಿದ್ದು, ರೈಲ್ವೆ ಇಲಾಖೆಯಲ್ಲಿ ಪದೋನ್ನತಿಗಾಗಿ ನಡೆದಿದ್ದ ಸಿಇಟಿ