Breaking News

ವಿಘ್ನನಾಶಕನ ಹಬ್ಬ ಆರೋಗ್ಯಪೂರ್ಣವಾಗಿರಲಿ:

Spread the love

ಕೊರೊನಾದಂಥ ಮಹಾವಿಘ್ನದಿಂದಾಗಿ ಎರಡು ವರ್ಷಗಳಲ್ಲಿ ಗಣಪನ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅವಕಾಶ ಆಗಲೇ ಇಲ್ಲ. ಈಗ ಸಾರ್ವಜನಿಕವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಲು ಕೊನೆಯ ಹಂತದ ಸಿದ್ಧತೆಗಳು ನಡೆದಿವೆ. ಈ ಸಂಭ್ರಮದ ಕ್ಷಣದಲ್ಲೇ ನಾವು ಮೈ ಮರೆಯುವ ಹಾಗಿಲ್ಲ.

ಈ ವರ್ಷವೂ ನಾವೆಲ್ಲರೂ ಎಚ್ಚರಿಕೆಯಿಂದ ಹಬ್ಬವನ್ನು ಆಚರಿಸ ಬೇಕಾಗಿದೆ. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕೊರೊನಾ ಸೋಂಕಿನ ಹಾವಳಿ ನಿಧಾನವಾಗಿ ಇಳಿಕೆಯಾಗುತ್ತಿದೆ ಮತ್ತು ಸೋಂಕಿನ ಪ್ರಭಾವದಿಂದ ಉಂಟಾಗಿರುವ ಆರ್ಥಿಕ ಹೊಡೆತದಿಂದ ಜನರು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾರ್ವಜನಿಕವಾಗಿ ಹಬ್ಬ ಆಚರಣೆಯ ವೇಳೆ ಗರಿಷ್ಠ ಪ್ರಮಾಣದ ಎಚ್ಚರಿಕೆಯನ್ನು ವಹಿಸಿಕೊಳ್ಳುವುದು ಅಗತ್ಯ. ಕೊರೊನಾ ಸಮಸ್ಯೆಯ ತೀವ್ರತೆ ತಗ್ಗಿದ್ದರೂ ನಮ್ಮ ಸುತ್ತಮುತ್ತಲಿನಿಂದ ಅದು ಸಂಪೂರ್ಣವಾಗಿ ನಿವಾರಣೆ ಆಗಿಲ್ಲ.

ಹೀಗಾಗಿ ಎಲ್ಲರೂ ಮಾಸ್ಕ್ ಧರಿಸುವುದು, ಅಂತರ ಪಾಲನೆಯನ್ನು ಕಾಯ್ದುಕೊಳ್ಳುವುದು ಅನಿವಾರ್ಯ. ಏಕೆಂದರೆ ಆಚರಣೆ ಮತ್ತು ಭಕ್ತಿಯ ಪರಾಕಾಷ್ಠೆಯಲ್ಲಿ ನಾವು ಆರೋಗ್ಯವನ್ನು ಕಡೆಗಣಿಸುವಂತೆ ಆಗಬಾರದು.

ಆರೋಗ್ಯದಷ್ಟೇ ಮತ್ತೊಂದು ಕಾಳಜಿಯುಕ್ತ ಕ್ಷೇತ್ರವೆಂದರೆ ಪರಿಸರ ರಕ್ಷಣೆ. ಕೆಲವು ಕಡೆಗಳಲ್ಲಿ ಬುಧವಾರ ಒಂದು ದಿನ ಮಾತ್ರ ಗಣಪನ ಹಬ್ಬ ಆಚರಿ ಸಲಾಗುತ್ತದೆ. ಗಣಪನ ವಿಗ್ರಹವನ್ನು ವಿಸರ್ಜಿಸಿದ ಬಳಿಕ ಆ ಸ್ಥಳದಿಂದ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲು ಎಲ್ಲರೂ ನೆರವಾಗಬೇಕಾಗಿದೆ. ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದೆ ಇದ್ದರೆ ಅದು ರೋಗ ರುಜಿನಗಳಿಗೆ ತಿರುಗುವ ಆತಂಕ ಇದೆ. ಈ ಹಿನ್ನೆಲೆಯಲ್ಲಿ ಗಣೇಶನ ವಿಗ್ರಹ ಇರಿಸುವ ಸಂಘಟನೆಗಳು ಎಚ್ಚೆತ್ತು ಕೊಳ್ಳಬೇಕು. ಇದರ ಜತೆಗೆ ಸಾರ್ವಜನಿಕರು ಪಾಲಿಸಬೇಕಾದ ಕೆಲವು ಕರ್ತವ್ಯಗಳಿವೆ. ಗಣೇಶನ ವಿಗ್ರಹಗಳು ಇರಿಸುವ ಸ್ಥಳಗಳಲ್ಲಿ ನೀಡಲಾದ ಪ್ರಸಾದ, ಆಹಾರದ ಪೊಟ್ಟಣಗಳನ್ನು ಅಲ್ಲಿಯೇ ಇರುವ ಕಸದ ಡಬ್ಬದಲ್ಲಿ ಹಾಕುವ ಮೂಲಕ ಸಂಘಟಕರಿಗೆ ಮತ್ತು ಆಯಾ ಸ್ಥಳೀಯ ಸಂಸ್ಥೆಗಳಿಗೆ ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಸಹಕರಿಸಲು ನೆರವಾಗಬೇಕು.

ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗಣಪನನ್ನು ಇರಿಸಿ ದವರೂ ಆಯಾ ಪ್ರದೇಶಕ್ಕೆ ಸಂಬಂಧಿಸಿದಂತೆ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಇರುವ ನಿಯಮಗಳನ್ನು ಅನುಸರಿಸಿ ಪರಿಸರ ಸ್ನೇಹ ಮತ್ತು ಆರೋಗ್ಯಯುತವಾಗಿರುವ ವಾತಾವರಣದಲ್ಲಿ ವಿಘ್ನ ನಿವಾರಕನ ಹಬ್ಬ ಆಚರಿಸಿ, ನಮ್ಮೆಲ್ಲರಿಗೆ ಇರುವ ವಿಘ್ನಗಳನ್ನು ನಿವಾರಿಸಿಕೊಳ್ಳಬೇಕಾಗಿದೆ.

 


Spread the love

About Laxminews 24x7

Check Also

ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಅವ್ಯವಸ್ಥೆ ಕಂಡು ಗರಂ ಆದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ

Spread the love ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಅವ್ಯವಸ್ಥೆ ಕಂಡು ಗರಂ ಆದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚಿಕ್ಕೋಡಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ