Breaking News

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಸ್ವಾಮೀಜಿ ವಿರುದ್ದ ಪೋಕ್ಸೋ ಪ್ರಕರಣ ದಾಖಲು, ಬಂಧನದ ಭೀತಿ

Spread the love

ದುರ್ಗ: ತಮಗೆ ಹಾಲು ಹಣ್ಣು ನೀಡಲು ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ದುರ್ಗದ ಇತಿಹಾಸ ಪ್ರಸಿದ್ದ ಮಠದ ಸ್ವಾಮೀಜಿ ವಿರುದ್ದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಪೋಕ್ಸೊ ಕಾಯಿದೆ ಅಡಿಯಲ್ಲಿ ಶ್ರೀ ಶ್ರೀ ಶ್ರೀ ಸ್ವಾಮೀಜಿ ವಿರುದ್ದ ಪ್ರಕರಣವನ್ನು ದಾಖಲು ಮಾಡಲಾಗಿದೆ ಎನ್ನಲಾಗಿದೆ.

 

ಸದ್ಯ ಘಟನೆ ದುರ್ಗದಲ್ಲಿ ನಡೆದಿದ್ದು, ಸಂತ್ರಸ್ಥ ವಿದ್ಯಾರ್ಥಿನಿಯರು ತಮಗೆ ಆದ ಅನ್ಯಾಯಕ್ಕೆ ದುರ್ಗದಲ್ಲಿ ನ್ಯಾಯಾ ಸಿಗುವುದಿಲ್ಲ ಅಂತ ಮನಗಂಡ ಮೈಸೂರಿನಲ್ಲಿರುವ ಒಡನಾಡಿ ಸಂಸ್ಥೆ ಬಳಿ ತಮ್ಮ ನೋವನ್ನು ತೋಡಿಕೊಂಡ ವೇಳೆಯಲ್ಲಿ ಒಡನಾಡಿ ಸಂಸ್ಥೆಯವರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಸಂಬಂಧಪಟ್ಟ ಘಟನೆ ಬಗ್ಗೆ ಮಾಹಿತಿ ನೀಡಿತ್ತು, ಬಳಿಕ ಮಕ್ಕಳಿಂದ ಮಾಹಿತಿ ಪಡೆದುಕೊಂಡ ಸಮಿತಿ ಸಂಬಂಧಪಟ್ಟ ಘಟನೆಯನ್ನು ಎಲ್ಲಾ ಆಯಾಮದಲ್ಲೂ ಪರಿಶೀಲನೆ ನಡೆಸಿದ ಬಳಿಕ ಶ್ರೀ ಶ್ರೀ ಶ್ರೀ ಸ್ವಾಮೀಜಿಗಳ ವಿರುದ್ದ ಮೊಕದ್ದಮೆ ದಾಖಲಿಸಲು ಮಕ್ಕಳ ರಕ್ಷಣಾಧಿಕಾರಿಗೆ. ಪ್ರಾರಂಭದಲ್ಲಿ ಪ್ರಭಾವಿ ಸ್ವಾಮೀಜಿಗಳ ವಿರುದ್ದ ಕೇಸ್‌ ದಾಖಲು ಮಾಡಲು ಅಧಿಕಾರಿಗಳು ಹಿಂದೇಟು ಹಾಕಿದ್ದರು ಎನ್ನಲಾಗಿದ್ದು, ಒಡನಾಡಿ ಸಂಸ್ಥೆಯವರು ಪ್ರಕರಣ ಸಂಬಂಧ ಡಿಸಿ ಗಮನಕ್ಕೆ ತಂದ ಬಳಿಕ ಸ್ವಾಮೀಜಿಗಳ ವಿರುದ್ದ ಕೇಸ್‌ ಅನ್ನು ಮಕ್ಕಳ ರಕ್ಷಣಾಧಿಕಾರಿಗಳು ನಜರ್‌ಬಾದ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಮಠದ ಉಚಿತ ಹಾಸ್ಟೆಲ್ ನಲ್ಲಿ ಇರುವ ಪ್ರೌಢಶಾಲೆಯ ಕೆಲವು ವಿದ್ಯಾರ್ಥಿನಿಯರಿಗೆ ಹಾಸ್ಟೇಲ್‌ ವಾರ್ಡ್‌ನ್‌ ಖುದ್ದು ಸ್ವಾಮಿಜಿಗಳಿಗೆ ಹೋಗಿ ಹಾಲು ನೀಡುವಂತೆ ಹೇಳುತ್ತಿದ್ದಳು ಎನ್ನಲಾಗಿದ್ದು, ಒಂದು ವೇಳೆ ಒಪ್ಪದೇ ಹೋದ್ರೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಳು ಎನ್ನಲಾಗಿದೆ. ಹಾಸ್ಟೆಲ್‌ ವಾರ್ಡ್ನ್‌ ಕಾಟಕ್ಕೆ ತಾಳಲಾರದೇ ಅನೇಕ ವಿದ್ಯಾರ್ಥಿನಿಯರು ಟಿಸಿ ತಗೊಂಡು ಬೇರೆ ಕಡೆ ಹೋಗಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ರಾಜ್ಯದ ಪ್ರಸಿದ್ದ ಇತಿಹಾಸ ಪ್ರಸಿದ್ದವಾದ ಸ್ವಾಮೀಜಿಗಳ ವಿರುದ್ದ ಕೇಳಿ ಬಂದಿರುವ ಕಾಮಪುರಾಣದ ಆರೋಪದ ಬಗ್ಗೆ ತನಿಖೆಯಿಂದಲೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ