ಖಾಯಂ ಪೌರಕಾರ್ಮಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತಿವೆ. ಆದರೆ ನೇರಪಾವತಿ ಅವರಿಗೆ ಜಾಗ, ಮನೆಗಳು ಸಿಗುತ್ತಿಲ್ಲ. ಹೀಗಾಗಿ ಅವರಿಗೂ ಎಲ್ಲೆಲ್ಲಿ ಅವಕಾಶ ಇದೆ, ಅಲ್ಲಿ ಸೌಲಭ್ಯಗಳನ್ನು ನೀಡುವ ಕೆಲಸ ಮಾಡಲಾಗುವುದು ಎಂದು ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ.ಶಿವಣ್ಣ ಕೋಟೆ ತಿಳಿಸಿದರು.
ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಯೋಗದ ಅಧ್ಯಕ್ಷರಾದ ಎಂ.ಶಿವಣ್ಣ ಕೋಟೆ ನಿನ್ನೆ ಮಧ್ಯಾಹ್ನ 4 ಗಂಟೆ ಸುಮಾರಿಗೆ ಸುವರ್ಣವಿಧಾನಸೌಧಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ 38 ಇಎಲ್‍ಬಿಸಿಗಳ, ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರ ಸಮಸ್ಯೆಗಳನ್ನು ನಿನ್ನೆ ಆಲಿಸಿದ್ದೇನೆ.
ಅಹವಾಲು ಆಲಿಸಿದ ನಂತರ ಇಂದು ಸಭೆ ಮಾಡಿದ್ದೇವೆ ಎಂದರು. ಇನ್ನು ಬೆಳಗಾವಿ ನಗರದ ಕ್ವಾಟರ್ಸಗಳನ್ನು ಕೊಡಬೇಕು ಎಂದು ಜಾಗೃತಿ ಸಮಿತಿ ಮತ್ತು ಇನ್ನಿತರ ನಾಗರಿಕರು ಬೇಡಿಕೆ ಇಟ್ಟಿದ್ದರು. ಹೀಗಾಗಿ ಒಂದು ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದು, ಸಾಂಕೇತಿಕವಾಗಿ 12 ಪೌರಕಾರ್ಮಿಕರಿಗೆ ಮನೆಗಳ ಹಕ್ಕು ಪತ್ರ ವಿತರಣೆ ಮಾಡಿದ್ದೇವೆ.ಮುಂದೆ ಮತ್ತಷ್ಟು ಪರಿಶೀಲನೆ ಮಾಡಿ ಅರ್ಹ ಪೌರಕಾರ್ಮಿಕರಿಗೆ ಮನೆಗಳನ್ನು ಜಿಲ್ಲಾಧಿಕಾರಿಗಳು ವಿತರಣೆ ಮಾಡಲಿದ್ದಾರೆ. ಇಎಲ್‍ಬಿಸಿ ಹಾಗೂ ಪಂಚಾಯತಿಗಳಲ್ಲಿ ಅನೇಕ ಕಡೆ ಜಾಗ ಇರುವುದಿಲ್ಲ. ಅಲ್ಲಿಂದ ಪ್ರಸ್ತಾವನೆ ಕಳಿಸಿಕೊಟ್ಟು ಜಿಲ್ಲಾಧಿಕಾರಿಗಳೇ ಪರಿಶೀಲನೆ ನಡೆಸಿ ಅವರಿಗೆ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಾರೆ ಎಂದರು.