ರಾಜ್ಯದ ಎರಡನೇ ರಾಜಧಾನಿ ಎಂದು ಕರೆಯಿಸಿಕೊಳ್ಳುವ ಬೆಳಗಾವಿಯಲ್ಲಿಯೇ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಬೆಳಗಾವಿ ಬಾರ್ ಆಸೋಸಿಯೇಷನ್ ಒತ್ತಾಯಿಸಿದೆ.
ಗುರುವಾರದಂದು ಬೆಳಗಾವಿ ಬಾರ್ ಆಸೋಸಿಯೇಷನ್‍ನ ಅಧ್ಯಕ್ಷ ಪ್ರಭು ಯತ್ನಟ್ಟಿ ಅವರ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಆಗಮಿಸಿದ ಬಾರ್ ಅಸೋಸಿಯೇಷನ್‍ನ ಸದಸ್ಯರು ಪ್ರತಿಭಟನೆಯನ್ನು ನಡೆಸಿದರು.
ಬೆಳಗಾವಿಯಲ್ಲಿಯೇ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಮನವಿವನ್ನು ಸಲ್ಲಿಸಿದರು.ಬೆಳಗಾವಿ ಬಾರ್ ಆಸೋಸಿಯೇಷನ್‍ನ ಅಧ್ಯಕ್ಷ ಪ್ರಭು ಯತ್ನಟ್ಟಿ ಬೆಳಗಾವಿ ಜಿಲ್ಲೆ ಸಾಕಷ್ಟು ಉತ್ತುಂಗದಲ್ಲಿದ್ದು, ಸಾಕಷ್ಟು ನಾಗರೀಕ ಸೌಲಭ್ಯಗಳನ್ನು ಕೂಡ ಹೊಂದಿದೆ. ನೈಸರ್ಗೀಕ ಸಂಪತ್ಭರಿತವಾಗಿದ್ದು, ಇಲ್ಲಿನ ಹವಾಮಾನ ಕೂಡ ಚೆನ್ನಾಗಿದೆ.