Breaking News

ನಾಲಿಗೆ ಕಟ್ ಮಾಡುತ್ತೇನೆ ಹುಷಾರ್ ಎಂಬುದಾಗಿ ಈಶ್ವರಪ್ಪಗೆ  ಬೆದರಿಕೆ ಪತ್ರ

Spread the love

ಶಿವಮೊಗ್ಗ: ಮಾಜಿ ಸಚಿವ ಕೆ ಎಸ್ ಈಶ್ವರಪ್ಪಗೆ   ಇಂದು ಬೆದರಿಕೆ ಪತ್ರವೊಂದುಬಂದಿದೆ. ಆ ಪತ್ರದಲ್ಲಿ ನಾಲಿಗೆ ಕಟ್ ಮಾಡುತ್ತೇನೆ ಹುಷಾರ್ ಎಂಬುದಾಗಿ ಎಚ್ಚರಿಕೆ ನೀಡಲಾಗಿದೆ.

ಈ ಸಂಬಂಧ ಅವರು ಪೊಲೀಸರಿಗೆ ಸೂಕ್ತ ತನಿಖೆ ನಡೆಸಿ, ಬೆದರಿಕೆ ಹಾಕಿದ ಆರೋಪಿಯನ್ನು ಬಂಧಿಸುವಂತೆ ದೂರು ನೀಡಿದ್ದಾರೆ.

 

ಶಾಸಕ ಕೆ.ಎಸ್ ಈಶ್ವರಪ್ಪ ಅವರ ಶಿವಮೊಗ್ಗ ನಗರದಲ್ಲಿನ ಮಲ್ಲೇಶ್ವರದ ನಿವಾಸಕ್ಕೆ ಅನಾಮದೇಯ ಬೆದರಿಕೆ ಪತ್ರವೊಂದು ಬಂದಿದೆ. ಆ ಪತ್ರದಲ್ಲಿ ಸ್ವತಂತ್ರ್ಯ ಸೇನಾನಿಯಾದ ನಮ್ಮ ಸಮಾಜದ ಟಿಪ್ಪುಸುಲ್ತಾನ್ ಬಗ್ಗೆ ನಿನ್ನು ಬಾಯಿಯಿಂದ ಬಂದ ಮುಸ್ಲೀಂ ಗೂಂಡಾ ಅಂತ ಹೇಳಿದ್ದೆಯಲ್ಲ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಕಾಲೇಜಿನ ಕಟ್ಟಡ ಕಟ್ಟಲಿಕ್ಕೆ ನಮ್ಮ ಮುಸ್ಲಿಂ ಸಿಮೆಂಟ್ ಬ್ರಿಕ್ಸ್ ಬೇಕೆ ನಿನಗೆ, ಆದ್ರೇ.. ನಿನಗೆ ಮುಸ್ಲೀಂಮರು ಬೇಡ ಮಗನೆ ನಾಚಿಕೆಯಾಗಬೇಕು. ನಾಲಿಗೆ ಕಟ್ ಮಾಡುತ್ತೇನೆ ಹುಷಾರ್ ಮಗನೆ, ಬಾಲ ಬಿಚ್ಚ ಬೇಡ ಎಂಬುದಾಗಿ ಎಚ್ಚರಿಕೆ ನೀಡಲಾಗಿದೆ.

 

ಅನಾಮದೇಯ ಬೆದರಿಕೆ ಪತ್ರ ಬಂದ ಕಾರಣ, ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೆ.ಎಸ್ ಈಶ್ವರಪ್ಪ ಆಪ್ತ ಸಹಾಯಕ ದೂರು ನೀಡಿದ್ದಾರೆ. ಬೆದರಿಕೆ ಪತ್ರವನ್ನು ಪರಿಶೀಲಿಸಿ, ತನಿಖೆ ಕೈಗೊಂಡು, ಸೂಕ್ತ ಕಾನೂನು ಕ್ರಮ ವಹಿಸುವಂತೆ ಕೋರಲಾಗಿದೆ.


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ