Breaking News

ಪತ್ರಕರ್ತರ ಮಾಸಾಶನ ಹೆಚ್ಚಿಸಲಾಗುವುದು  ಎಂದು ಬಸವರಾಜ ಬೊಮ್ಮಾಯಿ

Spread the love

ಬೆಂಗಳೂರು : ಪತ್ರಕರ್ತರ ಮಾಸಾಶನ ಹೆಚ್ಚಿಸಲಾಗುವುದು  ಎಂದು  ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಅವರು ಬುಧವಾರ ಪ್ರೆಸ್ ಕ್ಲಬ್ ಬೆಂಗಳೂರು, ಇಲ್ಲಿ ಆಯೋಜಿಸಲಾಗಿದ್ದ ಬ್ಯುಸಿನೆಸ್ ಐಕಾನ್  ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪತ್ರಕರ್ತರ ಹಲವಾರು ಬೇಡಿಕೆಗಳಿವೆ.  ಪತ್ರಕರರಿಗೆ  ಸಾಮಾಜಿಕವಾಗಿ, ಆರ್ಥಿಕವಾಗಿ ಭದ್ರತೆಯ ಅವಶ್ಯಕತೆ ಇದೆ. ನಿವೃತ್ತ  ಪತ್ರಕರ್ತರಿಗೆ ಮಾಸಾಶನ ನೀಡುವ   ಸಮಿತಿ ರಚಿಸಲು ನಾಳೆಯೇ ಆದೇಶ ಹೊರಡಿಸಲಾಗುವದು. ಅದಕ್ಕಿರುವ  ನಿಯಮಗಳನ್ನು ಸರಳೀಕರಣಗೊಳಿಸಲಾಗುವುದು ಎಂದು ತಿಳಿಸಿದರು.
ವಿಧಾನಸಭೆಯ ಹತ್ತಿರವೇ ಪ್ರೆಸ್ ಕ್ಲಬ್ ಇದೆ. ಪತ್ರಕರ್ತರು ಶಕ್ತಿಸ್ಥಳ ಭಾಗ. ನಾಡು ಕಟ್ಟಲು ನಿಮ್ಮ ಶಕ್ತಿ ಬಳಕೆಯಾಗಲಿ.  ಹೊಗಳಿಕೆ ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸುವ ಸ್ಥಿತಪ್ರಜ್ಞತೆ ಇದ್ದಾಗ ರಾಜಕಾರಣಿ ಯಶಸ್ವಿಯಾಗಲು ಸಾಧ್ಯ. ಇವೆರಡರ ಮಧ್ಯೆ ಇರುವ ಸತ್ಯವನ್ನು ಕಂಡುಕೊಂಡು ಮುಂದೆ ಸಾಗಬೇಕು. ಇಂಥ ಕಾರ್ಯಕ್ರಮಗಳನ್ನು ಪ್ರೆಸ್ ಕ್ಲಬ್  ಹೆಚ್ಚಾಗಿ ಮಾಡಬೇಕು ಎಂದರು.
ಪ್ರೆಸ್ ಕ್ಲಬ್ ಸಾಮಾನ್ಯವಾಗಿ ಪತ್ರಿಕಾ ರಂಗದಲ್ಲಿ ಸಾಧನೆ ಮಾಡಿದವರನ್ನು ಗುರುತಿಸುತ್ತಾರೆ. ಬ್ಯುಸಿನೆಸ್ ಐಕಾನ್ ಅವಾರ್ಡ್ ಕೊಡುತ್ತಾರೆ ಎಂದಾಗ ಆಶ್ಚರ್ಯವಾಯಿತು. ಪ್ರೆಸ್ ಕ್ಲಬ್ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಹೆಚ್ಚಿಸಿಕೊಂಡಿದೆ. ಬ್ಯುಸಿನೆಸ್ ನಲ್ಲಿ ವಿಶೇಷ ಸಾಧನೆ ಮಾಡಿರುವವರನ್ನು ಗುರುತಿಸಿ ಅವಾರ್ಡ್ ಕೊಡುವುದು ವಿಶೇಷ ಎಂದು ತಿಳಿಸಿ ಪ್ರಶಸ್ತಿ ಪಡೆದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಇದು ವಿಶೇಷ ಪ್ರಶಸ್ತಿ. ಟೀಕೆಗಾರರಿಂದ  ಪ್ರಶಸ್ತಿ ಪಡೆಯುವುದು ಸುಲಭವಲ್ಲ. ಅವರಿಂದ ಪ್ರಶಸ್ತಿ ಪಡೆದಿರುವುದು ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೀರಿ ಎಂದು ನಿರೂಪಿಸುತ್ತದೆ ಎಂದರು.

Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ