Breaking News

ಕೊಲೆಯಾದ 50 ದಿನಗಳ ಬಳಿಕ ಅಸ್ಥಿಪಂಜರ ಪತ್ತೆ; ಇಬ್ಬರ ಜತೆ ಅಕ್ರಮ ಸಂಬಂಧ ಹೊಂದಿದ್ದವಳಿಂದಲೇ ಕೊಲೆ!

Spread the love

ನೆಲಮಂಗಲ: ಇಲ್ಲೊಂದು ಕೊಲೆ ನಡೆದ 50 ದಿನಗಳ ಬಳಿಕ ಕೊಲೆಗೀಡಾದವನ ಅಸ್ಥಿಪಂಜರ ಪತ್ತೆಯಾಗಿದ್ದು, ಇಬ್ಬಿಬ್ಬರ ಜತೆ ಅಕ್ರಮ ಸಂಬಂಧ ಹೊಂದಿದ್ದಾಕೆಯೇ ಕೊಲೆಗಾತಿ ಎಂಬುದು ಪತ್ತೆಯಾಗಿದೆ. ಈ ಕೊಲೆಗೆ ಸಂಬಂಧಿಸಿದಂತೆ ಮಹಿಳೆಯೊಬ್ಬಳ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

 

ರಾಯಚೂರು ಮೂಲದ ದೊಡ್ಡಲಿಂಗಪ್ಪ (45) ಕೊಲೆಯಾದ ವ್ಯಕ್ತಿ. ಲಕ್ಷ್ಮೀ (35) ಮತ್ತು ವೆಂಕಟೇಶ್​ (40) ಕೊಲೆ ಆರೋಪಿಗಳು. ಲಕ್ಷ್ಮೀಗೆ ವೆಂಕಟೇಶ್ ಜತೆಗಷ್ಟೇ ಅಲ್ಲದೆ, ದೊಡ್ಡಲಿಂಗಪ್ಪ ಜತೆಗೂ ಅಕ್ರಮ ಸಂಬಂಧ ಇತ್ತೆಂದು ಹೇಳಲಾಗಿದೆ. ಜು. 2ರಂದು ತುಮಕೂರಿನ ಜಯನಗರ ಠಾಣೆ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದ್ದು, ಇಂದು ಅಸ್ಥಿಪಂಜರ ಪತ್ತೆಯಾಗಿದೆ.


Spread the love

About Laxminews 24x7

Check Also

ಅನಾರೋಗ್ಯದಿಂದ ತಾಯಮ್ಮ ಹುಲಿ ಸಾವು

Spread the loveಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಹುಲಿ ತಾಯಮ್ಮ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮುಂಜಾನೆ 3.45ರ ಸಮಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ