ತಲೆಗೆ ಬಿದ್ದ ಪೆಟ್ಟಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳಿಗೆ ವೈದ್ಯಕೀಯ ಸಿಬ್ಬಂದಿ ಕಾಂಡೋಮ್ ಕವರ್ ಬಳಸಿ ಬ್ಯಾಂಡೇಜ್ ಹಾಕಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಧರ್ಮಗಢ ಮೂಲದ ಮಹಿಳೆ ರೇಶ್ಮಾ ಭಾಯಿ ಪೊರ್ಸಾ ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬಂದಿದ್ದಾರೆ.
ಅಲ್ಲಿ ಡಾ.ಧಮೇಂದ್ರ ರಜಪೂತ್ ಮಹಿಳೆಯನ್ನು ಪರೀಕ್ಷೆ ಮಾಡಿದ್ದು, ವಾರ್ಡ್ ಬಾಯ್ ಅನಂತ್ ರಾಮ್‌ಗೆ ಬ್ಯಾಂಡೇಜ್ ಹಾಕುವಂತೆ ಸೂಚಿಸಿದ್ದಾರೆ.
ಆತ ರಕ್ತವನ್ನು ನಿಲ್ಲಿಸುವ ಸಲುವಾಗಿ ಕಾಂಡೋಮ್ ಕವರ್ ಇಟ್ಟು ಅದರ ಮೇಲೆ ಹತ್ತಿಯಿಟ್ಟು ಬ್ಯಾಂಡೇಜ್ ಮಾಡಿದ್ದಾನೆ ಎನ್ನಲಾಗಿದೆ.
ಮಹಿಳೆ ಹೆಚ್ಚಿನ ಚಿಕಿತ್ಸೆಗಾಗಿ ಮೊರೆನಾ ಜಿಲ್ಲಾಸ್ಪತ್ರೆಗೆ ಬಂದಾಗ ಈ ವಿಚಾರ ತಿಳಿದುಬಂದಿದೆ. ಈ ರೀತಿ ಬೇಜವಾಬ್ದಾರಿ ತೋರಿದ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ.