Breaking News

ಮಗು ಅಪಹರಣ ಮಾಡಿ, ಹಣಕ್ಕೆ ಬೇಡಿಕೆ ಇಟ್ಟ, ಖತರ್ನಾಕ ಗ್ಯಾಂಗ ಪತ್ತೆ ಹಚ್ಚಿದ, ಸಂಕೇಶ್ವರ ಪೋಲಿಸರು,

Spread the love

ದಿನಾಂಕ: 02/08/2022 ರಂದು ಒಂಬತ್ತು ನಾಲವತ್ತ ಗಂಟೆಗೆ, ಭಾಸ್ಕರ ಪ್ರಕಾಶ ಕಾಕಡೆ, ಸಾಕಿನ್ ಮಾಳಿಗಲ್ಲಿ ಸಂಕೇಶ್ವರ ತಾಲ್ಲೂಕು ಹುಕ್ಕೇರಿ ಇವರು ಸಂಕೇಶ್ವರ ಪೊಲೀಸ ಠಾಣಿಗೆ ಹಾಜರಾಗಿ ನನ್ನ ಅಪ್ರಾಪ್ತ ಹದಿನಾಲ್ಕು ವರ್ಷ ವಯಸ್ಸಿನ ಮಗನು ದಿನಾಲು ಶಾಲೆ ಮುಗಿಸಿಕೊಂಡ ಟೂಶನಕ್ಕೆ ಹೋಗುತ್ತಾನೆ.

ಸದರಿಯವನು ದಿನಾಂಕ: 02/08/2022 ರಂದು ಸಂಜೆ ಟೊಶನಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿದ್ದಾಗ ಯಾರೋ ಅಪರಿಚಿತ ಆರೋಫಿತನು ತನ್ನ ಮಗನ ಹತ್ತಿರ ಬಂದು ನಿಮ್ಮ ತಂದೆಗೆ ನಿಪ್ಪಾಣಿಯಲ್ಲಿ ದವಾಖಾನೆಗೆ ದಾಖಲೆ ಮಾಡಿದ್ದಾರೆ. ನಿಮ್ಮ ಮನೆಯ ಜನರೆಲ್ಲರು ಅಲ್ಲಿಗೆ ಹೋಗಿದ್ದಾರೆ ಅಂತಾ ಪುಸಲಾಯಿಸಿ ನಾವು ಅಲ್ಲಗೆ ಹೋಗೊಣ ಬಾ ಅಂತಾ ಹೇಳಿ ತನ್ನ ಮಗನಿಗೆ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ವಗೈರೆ ನಮೂದ ಇದ್ದ ವಿದ್ಯರ್ಥಿಯನ್ನು ಸಂಕೇಶ್ವರ ಪೊಲೀಸ ಠಾಣೆ ಅಪರಾಧ ಸಂಖ್ಯೆ 178 ಬಾರ್ 2022, ಕಲಂ 363 ಐಪಿಸಿ ನೇದ್ದಕ್ಕೆ ಪ್ರಕರಣ ದಾಖಲಸಿಕೊಂಡ ಸಂಕೇಶ್ವರ ಪೋಲಿಸರು ಒಂದು ಗಂಟೆಯಲ್ಲಿ ಅಪಹರಣವಾದ ಮಗುವನ್ನು ಸಂಕೇಶ್ವರ ಪೋಲಿಸರು ಪತ್ತೆ ಹಚ್ವಿ ಠಾಣೆಗೆ ತಂದು ತಂದೆಗೆ ಒಪ್ಪಿಸುತ್ತಾರೆ

ಪ್ರಕರಣದ ಬೆನ್ನು ಹತ್ತಿದ ಸಂಕೇಶ್ವರ ಪೋಲಿಸರು ಅಪಹರಣಾಕಾರರನ್ನು ಹದಿನೈದು ದಿನದಲ್ಲಿ ಪತ್ತೆ ಹಚ್ಚಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಮಾನ್ಯ ಎಸ್.ಪಿ ಸಾಹೇಬರು ಬೆಳಗಾವಿ ಶ್ರೀ ಸಂಜೀವ ಪಾಟೀಲ ಹೆಚ್ಚುವರಿ ಎಸ್.ಪಿ ಸಾಹೇಬರು ಮಹಾನಿಂಗ ನಂದಗಾವಿ ಬೆಳಗಾವಿ, ಡಿ.ಎಸ್.ಪಿ ಸಾಹೇಬರು ಮನೋಜಕುಮಾರ್ ನಾಯಿಕ ಗೋಕಾಕ ಹಾಗೂ ಯಮಕನಮರಡಿ ಪಿಐ ರಮೇಶ ಛಾಯಾಗೋಳ ಮಾರ್ಗದರ್ಶನದಲ್ಲಿ ಶ್ರೀ.ಜಿ.ಬಿ.ಕೊಂಗನೋಳಿ ಪಿ.ಎಸ್.ಐ (ಕಾ&ಸು) ಸಂಕೇಶ್ವರರವರು ಸಿಬ್ಬಂದಿ ಜನರಾದ ಬಿ.ಕೆ.ನಾಗನೂರಿ, ಎಮ್.ಜಿ.ದಾದಾಮಾಕ, ಎಮ್.ಎಮ್.ಕರಗುಪ್ಪಿ,

ಬಿ.ವಿ.ಹುಲಕುಂದ,ವಾಯ್.ಎಚ್‌.ನದಾಫ, ಜಿ.ಟಿ.ಪಾಟೀಲ, ಬಿ.ಎಸ್.ಕಪರಟ್ಟಿ,ಬಿ.ಎನ್‌.ಮೇಲ್ಮಟ್ಟಿ,ಹಾಗು ಟೆಕ್ನಿಕಲ್‌ ಸೆಲ್‌ನ್‌ ಸಚೀನ ಪಾಟೀಲ ಮತ್ತು ವಿನೋದ ಠಕ್ಕನ್ನವರ ಮುಂತಾದವರನ್ನು ಒಳಗೊಂಡಿರುವ ಜನರ ತಂಡವನ್ನು ರಚಿಸಿ ಕೂಡಲೇ ಅಪಹರಣಕ್ಕೊಳಗಾದ ಬಾಲಕನನ್ನು ಅದೇ ದಿವಸ ಪತ್ತೆ ಮಾಡಿದ್ದು ಆರೋಪಿತರ ತಪಾಸಣೆಯನ್ನು ಮುಂದುವರೆಸಿ

ಈ ದಿವಸ ದಿನಾಂಕ: 18-08-2022 ರಂದು ಹಣದ ಬೇಡಿಕೆಗಾಗಿ ಹಣದ ಬೇಡಿಕೆಗಾಗಿ ಕೃತ್ಯದಲ್ಲಿ ಭಾಗಿಯಾದ ಆರು ಜನ ಆರೋಪಿತರಿಗೆ ದಸ್ತಗೀರ ಮಾಡಿ ಆರೋಪಿತರು ಕೃತ್ಯಕ್ಕೆ ಬಳಸಿದ 03 ಮೋಟಾರ ಸೈಕಲ್‌ ಗಳನ್ನು ಹಾಗು ಆರು ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ.ಈ ಪ್ರಕರಣ ಪತ್ತೆ ಹಚ್ಚಿದ ಸಂಕೇಶ್ವರ ಪೋಲಿಸರಿಗೆ ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಶಹಾಭಾಷ ಎಂದು ಶ್ಲಾಘಿಸಿದ್ದಾರೆ.

 


Spread the love

About Laxminews 24x7

Check Also

ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ

Spread the love ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಟೀಕೆಗಳು ಸಾಯುತ್ತವೆ; ಕೆಲಸಗಳು ಉಳಿಯುತ್ತವೆ; ಕಲ್ಲಪ್ಪ ಬಡಿಗೇರ ವಿಶ್ವಕರ್ಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ