ಖಾನಾಪುರ ತಾಲೂಕಿನ ಹಲಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಗ್ರಾಮ ಪಂಚಾಯತಿಯ ದಾಖಲೆಗಳನ್ನು ಮರಾಠಿಯಲ್ಲಿಯೇ ನೀಡುವಂತೆ ಎಂಇಎಸ್ ಆಗ್ರಹಿಸಿದೆ.
ಹಲಸಿ ಗ್ರಾಮ ಪಂಚಾಯಿತಿಯವರು ಕನ್ನಡ ಭಾμÉಯಲ್ಲಿ ಸರಕಾರಿ ದಾಖಲೆ ಹಾಗೂ ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಮರಾಠಿ ಭಾಷಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಭಾಷಿಕರು ಶೇ.21ಕ್ಕಿಂತ ಹೆಚ್ಚಿದ್ದಾರೆ. ಅಲ್ಲದೇ ಹಲಸಿ, ಹಲಸಿವಾಡಿ, ನರಸೇವಾಡಿ, ಭಾಂಬರಡಾ ಗ್ರಾಮಗಳಲ್ಲಿ ಶೇ.90ಕ್ಕೂ ಹೆಚ್ಚು ಮರಾಠಿ ಭಾಷಿಕರಿದ್ದಾರೆ.
ಆದ್ದರಿಂದ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಭಾμÁ ಕಾಯ್ದೆ ಮತ್ತು ನ್ಯಾಯಾಲಯದ ಆದೇಶದಂತೆ ಪಂಚಾಯತಿಗಳು ನೀಡುವ ಎಲ್ಲಾ ದಾಖಲೆಗಳು, ಸುತ್ತೋಲೆಗಳು, ನೋಟಿಸ್‍ಗಳು, ತೆರಿಗೆ ರಶೀದಿಗಳನ್ನು ಕನ್ನಡದ ಜತೆಗೆ ಮರಾಠಿಯಲ್ಲಿ ದಾಖಲೆಗಳನ್ನು ನೀಡಬೇಕು. ಇಲ್ಲದಿದ್ರೆ ತೆರಿಗೆ ಪಾವತಿ ಮಾಡದೇ ಚಳವಳಿ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಬಳಿಕ ಹಲಸಿ ಪಿಡಿಓ ಆರ್.ಜೆ.ರೆಡ್ಡರ್ ಅವರಿಗೆ ಎಂಇಎಸ್ ಮುಖಂಡರು ಮನವಿ ಸಲ್ಲಿಸಿದರು.