ವಿವಾಹ ವಿಚ್ಛೇದನ ಪಡೆದು ಬೇರೆಯವರೊಂದಿಗೆ ಸಂಸಾರ ನಡೆಸಲು ಮುಂದಾಗಿದ್ದರಿಂದಲೇ ಸವದತ್ತಿಯಲ್ಲಿ ಪತ್ನಿಯನ್ನು ಪತಿಯೋರ್ವ ಕೊಲೆ ಮಾಡಿರುವ ಸತ್ಯ ಪ್ರಾಥಮೀಕ ತನಿಖೆಯಿಂದ ತಿಳಿದು ಬಂದಿದೆ ಎಂದು ಎಸ್ಪಿ ಸಂಜೀವ್ ಪಾಟೀಲ್ ಅವರು ತಿಳಿಸಿದರು.
ಇಂದು ಬೆಳಿಗ್ಗೆ ಸವದತ್ತಿ ಪಟ್ಟಣ ಸಾಯಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಶಬಾನಾ ಎಂಬ ಮಹಿಳೆಯ ಕೊಲೆಯನ್ನು ಮಾಡಲಾಗಿದೆ. ಪತಿಯೇ ಈ ಕೊಲೆಯನ್ನು ಮಾಡಿದ್ದು, ಈಗಾಗಲೇ ಈ ದಂಪತಿ ವಿಚ್ಛೇದನ ಕೋರಿ ಕೋರ್ಟ್ ಮೊರೆ ಹೋಗಿದೆ. 10 ವರ್ಷದ ಹಿಂದೆ ಖಾನಾಪುರ ಮೂಲದ ಶಬಾನಾ ಮತ್ತು ಮುನವಳ್ಳಿ ಮೂಲದ ಮೆಹಬೂಬ್‍ಸಾಬ್ ಗೊರವನಕೊಳ್ಳ ದೊಂದಿಗೆ ಮದುವೆಯಾಗಿತ್ತು.
ಇವರಿಗೆ 2 ಮಕ್ಕಳು ಕೂಡ ಇವೆ. ಇಂದು ಏಕಾಏಕಿ ಆಗಮಿಸಿ ಆಕೆಯನ್ನು ಕೊಲೆ ಮಾಡಿದ್ದಾನೆ. ವಿಚ್ಛೇದನೆ ಪಡೆದು ಬೇರೆಯವರೊಂದಿಗೆ ಮದುವೆಯಾಗಲು ಹೊರಟಿದ್ದರಿಂದ ಕೆರಳಿದ ಪತಿ ಈ ಕೃತ್ಯ ಎಸೆಗಿರುವುದಾಗಿ ಪ್ರಾಥಮೀಕ ತನಿಖೆಯಿಂದ ತಿಳಿದುಬಂದಿದೆ ಎಂದು ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.