ದಿವಂಗತ ಸುರೇಶ್ ಅಂಗಡಿ ರವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಬೆಳಗಾವಿ-ಧಾರವಾಡ ರೈಲು ಮಾರ್ಗ ಯೋಜನೆ ಈಗ ಒಂದು ಹಂತಕ್ಕೆ ಬಂದು ತಲುಪಿದ್ದು 444 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ಒಂದು ವಾರದಲ್ಲಿ ಇದಕ್ಕೆ ಗೆಜೆಟ್ ನೋಟಿಫಿಕೇಶನ್ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋಚಿಂದ ಕಾರಜೋಳ್ ಹೇಳಿದ್ದಾರೆ.
ಹೌದು ಇಂದು ಮಂಗಳವಾರ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಗಾವಿಯಲ್ಲಿ ಆಗಬೇಕಾದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕುರಿತಂತೆ ಚರ್ಚೆಯನ್ನು ನಡೆಸಲು ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ನೇತೃತ್ವವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ್ ವಹಿಸಿದ್ದರು. ಸಭೆಯಲ್ಲಿ ರೈಲ್ವೆ ಯೋಜನೆ, ಬಳ್ಳಾರಿ ನಾಲಾ, ರಾಷ್ಟ್ರೀಯ ಹೆದ್ದಾರಿ ಓಊ-4ಂ ಪರಿಶೀಲನೆ, ಬೆಳಗಾವಿ ವಿಮಾನ ನಿಲ್ದಾಣವನ್ನ ಅಂತರರಾಷ್ಟ್ರೀಯ ಮಟ್ಟದ ಮೇಲ್ದರ್ಜೆಗೇರಿಸುವ ಕುರಿತು ಚರ್ಚೆ ನಡೆಸಲಾಯಿತು.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ್‍ರವರು, ಬೆಳಗಾವಿ ಧಾರವಾಡ ರೈಲು ಯೋಜನೆ ದಿವಂಗತ ಸುರೇಶ್ ಅಂಗಡಿ ರವರ ಕನಸಾಗಿತ್ತು. ಅವರು ರೈಲ್ವೇ ಮಂತ್ರಿಯಾಗಿ ಈ ಕುರಿತು ಸಾಕಷ್ಟು ಕೆಲಸ ಮಾಡಿದ್ದರು. ಇದು ಈಗಾಗಲೇ ಒಂದು ಹಂತಕ್ಕೆ ಬಂದಿದ್ದು 444 ಎಕರೆ ಪ್ರದೇಶದಲ್ಲಿ
ಒಂದು ವಾರದಲ್ಲಿ ಇದಕ್ಕೆ ಗೆಜೆಟ್ ನೋಟಿಫಿಕೇಶನ್ ಆಗುತ್ತದೆ. 150 ಎಕರೆ ಪ್ರದೇಶಕ್ಕೆ ಅಧಿಕಾರಿಗಳು ನೋಟೊಫಿಕೇಶನ್ ಮಾಡಿ ನಾಳೆಯೇ ಕಳಿಸಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಬಜೆಟ್‍ನಲ್ಲಿ 300 ಕೋಟಿಯಷ್ಟು ಹಣ ಕೂಡ ಇದೆ. ಇದನ್ನು ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಬೇಕೆಂಬುದು ರೈಲ್ವೇ ಇಲಾಖೆಯವರಿಗೆ ಮನವಿ ಮಾಡುತ್ತೇವೆ. ನಾನು ಹಾಗೂ ಮುಖ್ಯಮಂತ್ರಿಗಳು ದೆಹಲಿಗೆ ಹೋದಾಗ ರೈಲ್ವೇ ಮಂತ್ರಿಗಳನ್ನು ಭೇಟಿಯಾಗಿ ಈಗಾಗಲೇ ಅವರಿಗೆ ಕೆಲಸ ಪ್ರಾರಂಭಿಸುವಂತೆ ಮನವಿ ಮಾಡಿದ್ದೇವೆ. ಹಾಗಾಗಿಯೇ ಇಂದು ಈ ಕುರಿತಂತೆ ಚರ್ಚೆಯನ್ನು ನಡೆಸಲು ಸಭೆಯನ್ನು ಕರೆಯಲಾಗಿತ್ತು ಎಂದರು.
ಇದೇ ವೇಳೆ ಚೋರ್ಲಾ ರಸ್ತೆ ನಿರ್ಮಾಣ ಕುರಿತಂತೆ ಮಾತನಾಡಿದ ಅವರು, ಚೋರ್ಲಾ ರಸ್ತೆ ಅಲ್ಲಿ 9 ತಿಂಗಳು ಮಳೆಯಾಗುವುದುರಿಂz,À ಅಲ್ಲಿ ಅಸ್ಮಾಟ್ ರಸ್ತೆ ತಡೆಯುವುದಿಲ್ಲ. ಹಾಗಾಗಿ ಸಿಮೆಂಟ್ ರಸ್ತೆ ಯಾಗಬೇಕೆಂದು ಅಧಿಕಾರಿಗಳಿಗೆ ಹೇಳಿದ್ದೇನೆ.ಹಾಗಾಗಿ ಈ ಕುರಿತಂತೆ ನಾನು ನಿತಿನ್ ಗಡ್ಕರಿ ರವರೊಂದಿಗೆ ಮಾತನಾಡಿದ್ದೇನೆ. ಅದಕ್ಕಾಗಿ ಪ್ರಪೋಸಲ್ ಸಿದ್ಧಮಾಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳಿಗೆ ಹೇಳಿದ್ದೇನೆ. ಇನ್ನು ಸಾಂಬ್ರಾ ನಿಲ್ದಾಣಕ್ಕೆ ಹೆಚ್ಚುವರಿಯಾಗಿ 100 ಎಕರೆ ಜಮೀನು ಭೂ ಸ್ವಾಧೀನವಾಗಬೇಕೆಂದು ಹೇಳಿದ್ದಾರೆ. ಹಾಗಾಗಿ ಈ ಕಾರ್ಯಕ್ಕೆ ಈಗಾಗಲೇ ನಾವು ಕೇಂದ್ರ ಸರಕಾರಕ್ಕೆ ಪ್ರಪೋಸಲ್ ಕಳಿಸುವ ಕಾರ್ಯ ಮಾಡುತ್ತೇವೆ. ಇನ್ನು ಈ ಕಾಮಗಾರಿಗೆ ಅನುಮತಿಯನ್ನು ಕೇಂದ್ರದಿಂದ ಕೊಡಿಸುವ ಕಾರ್ಯವನ್ನು ಕೂಡ ಮಾಡಲಾಗುತ್ತದೆ ಎಂದರು.
ಇದೇ ವೇಳೆ ಬಳ್ಳಾರಿ ನಾಲಾದಿಂದಾಗುವ ಹಾನಿ ಕುರಿತಂತೆ ಮಾತನಾಡಿದ ಅವರು, ನಿನ್ನೆ ಸಭೆಯಲ್ಲಿ ರೈತರೂ ಕೂಡ ಬಂದು ಕುಳಿತಿದ್ದರು. ಅವರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಈ ರೀತಿ ತೊಂದರೆಯಾಗುತ್ತಿದೆ ಎಂದು ಹೇಳುತ್ತದಿದ್ದಾರೆ. ಹಾಗಾಗಿ ನಾವು ಈಗಾಗಲೇ ಹೆದ್ದಾರಿ ಅಧಿಕಾರಿಗಳು, ನೀರಾವರಿ ಇಲಾಖೆ, ಪಾಲಿಕೆ ಅಧಿಕಾರಿಗಳು ಅಲ್ಲಿ ಪರಿಶೀಲನೆಯನ್ನು ಮಾಡಲಿದ್ದಾರೆ. ಅವರು ಏನು ವರದಿ ನೀಡುತ್ತಾರೆ ಎಂದು ನೋಡೋಣ. ಮುಂದೆ ಈ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಸಭೆಯಲ್ಲಿ ಬೆಳಗಾವಿ ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಜಿಪಂ ಸಿಇಒ ದರ್ಶನ ಎಚ್.ವಿ ಸೇರಿದಂತೆ ಇನ್ನೂ ಅನೇಕ ಅಧಿಕಾರಿಗಳು ಭಾಗಿಯಾಗಿದ್ದರು.