ಶಿವಮೊಗ್ಗ: ಭದ್ರಾವತಿಯಲ್ಲಿ ಬಜರಂಗದಳದ ಕಾರ್ಯಕರ್ತ ಸುನೀಲ್ ಮೇಲೆ ಮುಬಾರಕ್ ಅಲಿಯಾಸ್ ಡಿಚ್ಚಿ ಹಲ್ಲೆ ನಡೆಸಿದ್ದಾನೆ. ಸೋಮವಾರ ಸಂಜೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ನಂತರ ಮುಬಾರಕ್ ತನಗೆ ಹಲ್ಲೆ ನಡೆಸಿದ್ದಾನೆ ಎಂದು ಸುನೀಲ್ ದೂರು ನೀಡಿದ್ದಾನೆ.
ಈ ಹಲ್ಲೆಗೆ ಕಾರಣ ಎನ್ನಲಾದ ವಿಡಿಯೋ ಲಭ್ಯವಾಗಿದ್ದು, ಸೋಮವಾರ ಭದ್ರಾವತಿಯಲ್ಲಿ ಸುನೀಲ್ ಗುಡಿ-ಗುಡಿ ಆಡುತ್ತಿದ್ದಾಗ ಮುಬಾರಕ್ ಅದರ ವಿಡಿಯೋ ಮಾಡಿಕೊಂಡಿದ್ದ. ವಿಡಿಯೋ ಮಾಡಿದ್ದಕ್ಕೆ ಮುಬಾರಕ್ ಅನ್ನು ಸುನೀಲ್ ಪ್ರಶ್ನಿಸಿದ್ದು, ಇಬ್ಬರ ನಡುವೆ ಜಗಳ ಉಂಟಾಗಿದೆ. ಇದು ಮುಂದುವರಿದು ಸುನೀಲ್ ಮೇಲೆ ಹಲ್ಲೆ ಮುಬಾರಕ್ ಹಲ್ಲೆ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಆದರೆ ಸುನೀಲ್ ಮಾತ್ರ ಹಲ್ಲೆಗೆ ಬೇರೆಯೇ ಕಾರಣ ನೀಡುತ್ತಿದ್ದು, ಮುಬಾರಕ್ ಅಂಗವಿಕಲ ಯುವಕನಿಗೆ ಹಲ್ಲೆ ಮಾಡಲು ಮುಂದಾದ ವೇಳೆ ತಾನು ಅದನ್ನು ಪ್ರಶ್ನಿಸಿದಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರ ಎದುರು ಹೇಳಿಕೆ ದಾಖಲಿಸಿದ್ದಾನೆ.