Breaking News

ಶಾಸಕ ಅಭಯ ಪಾಟೀಲ್ ವಿರುದ್ಧ ಪರೋಕ್ಷ ಕಿಡಿ ಕಾರಿದ :ಕಾರಜೋಳ

Spread the love

ಚಿರತೆ ಪತ್ತೆಗೆ ಮುಧೋಳ ನಾಯಿ ತರೋಣ:

ಬೆಳಗಾವಿ ಜಿಲ್ಲೆಯಲ್ಲಿ ಚಿರತೆ ಹಾವಳಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಬೆಳಗಾವಿ ನಗರದಲ್ಲಿ ಪ್ರತ್ಯೇಕ್ಷವಾಗಿರುವ ಚಿರತೆ ಸೆರೆ ಹಿಡಿಯಲು 8 ಕಡೆಗಳಲ್ಲಿ ಬೋನ್ ಇಟ್ಟು ಕಾಯುತ್ತಿದ್ದಾರೆ. 50 ಜನ ಸಿಬ್ಬಂದಿ ನೇಮಕ ಮಾಡಲಾಗಿದೆ. ತಜ್ಞರನ್ನು ಸಹ ನೇಮಕ ಮಾಡಿದೆ. ಇಷ್ಟಕ್ಕೂ ಸೆರೆ ಸಿಗದಿದ್ದರೇ ಮುಧೋಳ ನಾಯಿಯನ್ನು ತಂದು ಚಿರತೆ ಸೆರೆ ಹಿಡಿಯಲಾಗುವುದು ಎಂದರು.

ಶಾಸಕ ಅಭಯ ಪಾಟೀಲ್ ವಿರುದ್ಧ ಪರೋಕ್ಷ ಕಿಡಿ

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಕರೆದ ಸಭೆಗೆ ನಮಗೆ ಆಹ್ವಾನ ಇರಲಿಲ್ಲ. ನಮಗೆ ಹೇಳದೆ ಬಳ್ಳಾರಿ ನಾಲೆಯ ಸಭೆ ಮಾಡಿದ್ದಾರೆ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇತ್ತೀಚೆಗೆ ನಾನು ಕರೆದ್ದು, ರೈಲ್ವೆ ಇಲಾಖೆಯಿಂದ ನಾಲ್ಕು ಹಳಿ ಮಾಡುವುದು ಹಾಗೂ ಸಾಂಬ್ರಾ ರಸ್ತೆ ಅಗಲೀಕರಣದ ವಿಚಾರಕ್ಕೆ. ಆದರೆ ಸ್ಥಳೀಯ ಜನರು ಹಾಗೂ ರೈತರು ಬಂದು ಅರ್ಜಿ ಕೊಟ್ಟರು. ಈ ಸಭೆಯಲ್ಲಿಯೂ ಅದನ್ನು ಚರ್ಚೆ ಮಾಡೋಣ ಎಂದು ಬಳ್ಳಾರಿ ನಾಲೆಯ ಚರ್ಚೆಯನ್ನೂ ಸಹ ಮಾಡಿದ್ದೇನೆ. ಇದರಲ್ಲಿ ತಪ್ಪೇನಿದೆ? ಎಂದರು.

ಜನರ ಸಂಕಷ್ಟ ನನ್ನ ಗಮನಕ್ಕೆ ತಂದರೆ ಚರ್ಚೆ ಮಾಡುವುದು ತಪ್ಪಾ. ಇದು ಜಿಲ್ಲಾ ಸಚಿವನಾಗಿ ಮಾಡುವ ಕೆಲಸ. ಅವರು ಬೇಕಾದ್ದು ಹೇಳಿಲಿ. ಸಭೆ ಕರೆದಿಲ್ಲ ಎಂದರೆ ನಾನೇನು ಮಾಡಲಿ ಎಂದು ಕಿಡಿ ಕಾರಿದರು.

ಈ ಸಂದರ್ಭದಲ್ಲಿ ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಎಸ್ಪಿ ಸಂಜೀವ ಪಾಟೀಲ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ ಪ್ರತಿಟಭಟನೆ.

Spread the love ಹುಕ್ಕೇರಿ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ