ಬೈಕ್ ಸ್ಕಿಡ್ ಆಗಿ ಬಿದ್ದು ಮೆದುಳು ಒಡೆದು ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಗಾವಿ ವಡಗಾಂವನ ಯಳ್ಳೂರ ರಸ್ತೆಯಲ್ಲಿ ನಡೆದಿದೆ.
ಬೆಳಗಾವಿಯ ವಡಗಾಂವ-ಯಳ್ಳೂರ ರಸ್ತೆಯ ಬಳ್ಳಾರಿ ನಾಲಾ ರೈಸ್ ಮಿಲ್ ಹತ್ತಿರ ಬೈಕ್ ಸ್ಕಿಡ್ ಆದ ಪರಿಣಾಮ ಯುವಕನೋರ್ವ ಸಾವನ್ನಪ್ಪಿದ್ದಾನೆ.
ಬೈಕ್ ಮೂಲಕ ಈ ಯುವಕ ಯಳ್ಳೂರ ಕಡೆ ಹೊರಟಿದ್ದ. ಟ್ರಕ್‍ನ್ನು ಓವರ್ ಟೆಕ್ ಮಾಡಲು ಹೋಗಿ ಸ್ಕಿಡ್ ಆಗಿ ಬಿದ್ದ ಪರಿಣಾಮ ಇತನ ಮೆದುಳು ಒಡೆದು ಚೂರು-ಚೂರಾಗಿದೆ. ಹೆಲ್ಮೆಟ್ ಇದ್ದಿದ್ದರೇ ಈತ ಬದುಕುಳಿಯುತ್ತಿದ್ದ ಎನ್ನಲಾಗಿದೆ.
ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.