Breaking News

ವಿವಾದದ ಹೇಳಿಕೆಯೇ ʼಲಾಲ್‌ ಸಿಂಗ್‌ ಚಡ್ಡಾʼ ಕ್ಕೆ ಮುಳುವಾಯಿತೇ? : ಟ್ರೋಲ್‌ ಆದ್ರು ಬೇಬೋ

Spread the love

ಮುಂಬಯಿ: ಮಿಸ್ಟರ್‌ ಪರ್ಫೆಕ್ಟ್‌ ಆಮಿರ್‌ ಖಾನ್‌ ನಟನೆಯ ಬಹು ನಿರೀಕ್ಷಿತ ʼಲಾಲ್‌ ಸಿಂಗ್‌ ಚಡ್ಡಾʼ ಸಿನಿಮಾ ರಿಲೀಸ್‌ ಆಗಿ ದೊಡ್ಡ ಮಟ್ಟದ ಸದ್ದು ಮಾಡುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಸಿನಿಮಾದ ಮೊದಲ ದಿನದ ಗಳಿಕೆಯಿಂದ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಕಮಾಲ್‌ ಮಾಡಿಲ್ಲ ಎನ್ನುವುದು ಸಾಬೀತಾಗಿದೆ.

 

1994 ರಲ್ಲಿ ಬಂದ ʼಫಾರೆಸ್ಟ್‌ ಗಂಪ್‌ʼ ರಿಮೇಕ್‌ ಚಿತ್ರವಾಗಿರುವ ʼಲಾಲ್‌ ಸಿಂಗ್‌ ಚಡ್ಡಾʼದಲ್ಲಿ ಬಹು ಸಮಯದ ಬಳಿಕ ಆಮಿರ್‌ ಖಾನ್‌ ಹಾಗೂ ಕರೀನಾ ಕಪೂರ್‌ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಸಟ್ಟೇರಿದ ದಿನದಿಂದ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಯಲ್ಲಿತ್ತು. ಇದೀಗ ಚಿತ್ರ ಬಿಡುಗಡೆಯಾದ ಬಳಿಕವೂ ಚಿತ್ರದ ಬಗ್ಗೆ ಪಾಸಿಟಿವ್‌ – ನೆಗೆಟಿವ್‌ ರೆಸ್ಪಾನ್ಸ್‌ ಜೋರಾಗಿ ಸುದ್ದಿಯಾಗುತ್ತಿದೆ.

ವಿವಾದದ ಹೇಳಿಕೆಯೇ ಬಹಿಷ್ಕಾರಕ್ಕೆ ಕಾರಣವಾಯಿಯೇ? : ಆಮಿರ್‌ ಖಾನ್‌ ಈ ಹಿಂದೆ ಕೊಟ್ಟ ಕೆಲವೊಂದು ಹೇಳಿಕೆಗಳು ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು. ಪದೇ ಪದೇ ಈ ರೀತಿಯ ಹೇಳಿಕೆ ಕೊಟ್ಟ ಆಮಿರ್‌ ಖಾನ್‌ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿ ಅವರ ಚಿತ್ರಗಳನ್ನು ನೋಡಬಾರದೆನ್ನುವ ಅಭಿಯಾವನ್ನೇ ಶುರು ಮಾಡಿದ್ದರು.

ಈ ಘಟನೆಗೆ ತುಪ್ಪ ಹಾಕಿದಂತೆ ನಟಿ ಕರೀನಾ ಕಪೂರ್‌ ಕೂಡ ಕೆಲ ದಿನಗಳ ಹಿಂದೆ, ʼಬಾಯ್ಕಾಟ್ ಲಾಲ್ ಸಿಂಗ್‌ ಚಡ್ಡಾʼ ಟ್ವಿಟರ್‌ ಅಭಿಯಾನದ ವಿರುದ್ಧ ಹರಿಹಾಯ್ದು ನಮ್ಮ ಚಿತ್ರಗಳನ್ನು ಇಷ್ಟಪಡದವರು, ನಮ್ಮ ಚಿತ್ರವನ್ನು ನೋಡುವ ಅಗತ್ಯವಿಲ್ಲ, ನಮ್ಮ ಸಿನಿಮಾ ನೋಡಿ ಎಂದು ಯಾರು ಹೇಳುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆ ಉರಿಯುತ್ತಿದ್ದ ವಿವಾದಕ್ಕೆ ಮತ್ತಷ್ಟು ಕಿಚ್ಚು ಹಚ್ಚುವಂತೆ ಮಾಡಿತ್ತು. ಆ ಬಳಿಕ ಕರೀನಾ ಕಪೂರ್‌ ತಮ್ಮ ಮಾತು ಬದಲಾಯಿಸಿ, ಚಿತ್ರ ರಿಲೀಸ್‌ ಗೆ ಹತ್ತಿರವಾಗುತ್ತಿದ್ದಂತೆ ʼದಯವಿಟ್ಟು ಲಾಲ್‌ ಸಿಂಗ್‌ ಚಡ್ಡಾವನ್ನು ಬಾಯ್‌ ಕಾಟ್‌ ಮಾಡಬೇಡಿ, ನೀವು ಉತ್ತಮವಾದ ಸಿನಿಮಾವನ್ನು ಬಾಯ್‌ ಕಾಟ್‌ ಮಾಡುತ್ತಿದ್ದೀರಿ, ನಾವು 250 ಮಂದಿ ಈ ಸಿನಿಮಾಕ್ಕಾಗಿ ತುಂಬಾ ಶ್ರಮಪಟ್ಟಿದ್ದೇವೆ. ದಯವಿಟ್ಟು ನಮ್ಮ ಸಿನಿಮಾವನ್ನು ನೋಡಿ ಎಂದಿದ್ದರು..


Spread the love

About Laxminews 24x7

Check Also

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಭೀಕರ ಕೊಲೆ; ಅರ್ಧ ಗಂಟೆಯಲ್ಲೇ ಆರೋಪಿಗಳ ಬಂಧನ

Spread the loveಹುಬ್ಬಳ್ಳಿ: ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ‌. ವಿಠ್ಠಲ ಕರಾಡೆ(29) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ