Breaking News

ಮೊಹರಂ ಹಬ್ಬ ಆಚರಣೆ: ಕೊಂಡ ಹಾಯುವಾಗ ನಿಗಿ ನಿಗಿ ಕೆಂಡದಲ್ಲಿ ಬಿದ್ದ ಯುವಕ

Spread the love

ಬೆಳಗಾವಿ: ಮೊಹರಂ ಹಬ್ಬ ಆಚರಣೆ ಸಂದರ್ಭದಲ್ಲಿ ಯುವಕನೊಬ್ಬ ಕೆಂಡ ಹಾಯಲು ಹೋಗಿ ಬೆಂಕಿಯಲ್ಲಿ ಬಿದ್ದ ಘಟನೆ ಸವದತ್ತಿ ತಾಲೂಕಿನ ಕೋ-ಶಿವಾಪೂರ ಗ್ರಾಮದ ನಡೆದಿದೆ.

ಮತ್ತೊಂದೆಡೆ, ಯುವಕನೊಬ್ಬ ಕೆಂಡವನ್ನು ಕೈಯಲ್ಲಿ ಹಿಡಿದು ಜನರ ಮೇಲೆ ಎರಚಿದ ಘಟನೆ ಸವದತ್ತಿ ತಾಲೂಕಿನ ತಲ್ಲೂರ ಗ್ರಾಮದಲ್ಲಿ ನಡೆದಿದೆ.

ಮೊಹರಂ ಹಬ್ಬದ ನಿಮಿತ್ತ ಪೂರ್ವಜರು ಮಾಡಿಕೊಂಡು ಬಂದ ಸಂಪ್ರದಾಯದಂತೆ ಕೋ-ಶಿವಾಪೂರ ಗ್ರಾಮದಲ್ಲಿ ಪ್ರತಿ ವರ್ಷವೂ ಕೆಂಡ ಹಾಯಲಾಗುತ್ತದೆ. ಈ ವೇಳೆ ಕೆಂಡ ಹಾಯಲು ಹೋಗಿ ಯುವಕನೊಬ್ಬ ಬೆಂಕಿಗೆ ಬಿದ್ದು ತಕ್ಷಣ ಎದ್ದು ಓಡಿ ಬಂದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ‌.

ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ‌ ಪಾರಾಗಿದ್ದಾನೆ ಮತ್ತೊಂದೆಡೆ, ಸವದತ್ತಿ ತಾಲೂಕಿನ ತಲ್ಲೂರ ಗ್ರಾಮದಲ್ಲಿ ಯುವಕನೊಬ್ಬ ಕೆಂಡ ಹಾಯುವ ವೇಳೆ ಹುಚ್ಚಾಟ ಪ್ರದರ್ಶಿಸಿದ್ದಾನೆ. ಕೈಯಲ್ಲಿ ಕೆಂಡ ಹಿಡಿದು ಜನರ ಮೇಲೆ ಎರಚಿ ವಿಕೃತಿ ಮೆರೆದಿದ್ದಾನೆ.


Spread the love

About Laxminews 24x7

Check Also

ಎಲ್ಲ ಜಾತಿ, ಜನಾಂಗ ಒಟ್ಟುಗೂಡಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ

Spread the love ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಜಾತಿ, ಜನಾಂಗ ಒಟ್ಟುಗೂಡಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಇಲ್ಲಿಯವರೆಗೆ 150ಕ್ಕೂ ಅಧಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ