Breaking News

ನಂದು ಇನ್ನೊಂದು ವಿಡಿಯೋ ಇದೆ; ಅದ್ಯಾವಾಗ ಬಿಡ್ತಾನೋ ಗೊತ್ತಿಲ್ಲ-ಸೋನು ಗೌಡ

Spread the love

ಟಿಕ್​ ಟಾಕ್​ ಹಾಗೂ ರೀಲ್ಸ್​ ಮೂಲಕ ಫೇಮಸ್​ ಆಗಿರೋ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು ಈಗ ಬಿಗ್​ ಬಾಸ್​ (Bigg Boss) ರಿಯಾಲಿಟಿ ಶೋನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ (Bigg Boss House) ಸ್ಪರ್ಧಿಗಳು ತಮ್ಮ ಖಾಸಗಿ ಬದುಕಿನ ಅನೇಕ ವಿವರಗಳನ್ನು ತೆರೆದಿಡುತ್ತಿದ್ದಾರೆ.

ಸೋನು ಶ್ರೀನಿವಾಸ್​​ ಗೌಡ ಅವರ ಖಾಸಗಿ ವಿಡಿಯೋ (Sonu Srinivas Gowda Viral Video) ಲೀಕ್​ ಆಗಿತ್ತು ಎಂಬುದು ಗೊತ್ತಿರುವ ವಿಚಾರ. ಆ ಬಗ್ಗೆ ಸ್ವತಃ ಸೋನು ಅವರೇ ಈಗ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮದು ಇನ್ನೊಂದು ವಿಡಿಯೋ (Video) ಇದೆ. ಅದನ್ನು ಅವನ್ನು ಯಾವಾಗ ರಿಲೀಸ್ ಮಾಡ್ತಾನೋ ಗೊತ್ತಿಲ್ಲ ಅನ್ನೋ ಆತಂಕವನ್ನು ಸಹ ಸೋನು ಗೌಡ ಹೊರಹಾಕಿದ್ದಾರೆ.

ನನ್ನ ವಿಡಿಯೋ ರೆಕಾರ್ಡ್​ ಮಾಡಿ ಬ್ಲಾಕ್​ ಮೇಲ್​

ನನ್ನ ಪರಿಚಯದ ವ್ಯಕ್ತಿಯೊಬ್ಬ ನನ್ನ ಜೊತೆ ಮೂರು ವರ್ಷ ಇದ್ದ. ಅವನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದ ನಂತರ ಪ್ರಪೋಸ್ ಮಾಡಿದ. ನಾನೂ ಒಪ್ಪಿಕೊಂಡೆ. ನಂತರ ನಮ್ಮ ಪ್ರೀತಿ ನಿಜವಾಗಿದ್ದರೆ ವಿಡಿಯೋ ಕಾಲ್ ಮಾಡು ಅಂದ. ನಾನು ನೇರವಾಗಿ ವಿಡಿಯೋ ಕಾಲ್ ಮಾಡಿದೆ. ಆದರೆ ಅವನು ಅದನ್ನೆಲ್ಲ ರೆಕಾರ್ಡ್ ಮಾಡಿಕೊಂಡ ಎಂದು ಸೋನು ಗೌಡ ಹೇಳಿದ್ದಾರೆ. ನೀನು ನನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆ ಆಗೋಕೆ ಆಗಲ್ಲ ಅಂತ ಆತ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ ಎಂದು ಸೋನುಗೌಡ ಹೇಳಿದ್ದಾರೆ.

ಮನೆಯ ಮಾನ ಮರ್ಯಾದೆ ತೆಗೆದುಹಾಕಿಬಿಟ್ಟೆ

ಒಂದೇ ಕ್ಷಣದಲ್ಲಿ ನಾನು ನಮ್ಮ ಮನೆಯ ಮಾನ ಮರ್ಯಾದೆ ತೆಗೆದುಹಾಕಿಬಿಟ್ಟೆ. ಹುಡುಗಿಯಾಗಿ ಹುಟ್ಟಿದ್ದೇ ತಪ್ಪಾಯ್ತು ಅಂತ ಅಳಲು ಶುರುಮಾಡಿದೆ. ಕುಟುಂಬದವರು ಮತ್ತು ಸಂಬಂಧಿಕರೆಲ್ಲ ನನಗೆ ಬೈಯ್ದರು ಎಂದು ಆ ಕಹಿ ಘಟನೆಯನ್ನು ನೆನಪು ಮಾಡಿಕೊಂಡು ಬಿಗ್​ ಬಾಸ್​ ಮನೆಯಲ್ಲಿ ಸೋನು ಗೌಡ ಕಣ್ಣೀರು ಹಾಕಿದ್ದಾರೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ