ಶಿವಮೊಗ್ಗ: ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮನೆ ಗೋಡೆ ಕುಸಿತ ಉಂಟಾಗಿ ಮನೆಯಲ್ಲಿದ್ದ ತಾಯಿ ಸಾವನ್ನಪ್ಪಿ, ಮಗ ಗಾಯಗೊಂಡಿರುವ ಘಟನೆ ಭದ್ರಾವತಿ ತಾಲೂಕಿನ ಕಾವಗೊಂಡನಹಳ್ಳಿಯಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಸುಜಾತ(60) ಮೃತಪಟ್ಟಿದ್ದು, ಇವರ ಮಗ ಕೃಷ್ಣಮೂರ್ತಿ(40) ಅವರ ಕಾಲಿಗೆ ಗಾಯವಾಗಿದ್ದು,ಇವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿ 9:30 ರ ಹೊತ್ತಿಗೆ ಟಿವಿ ನೋಡುತ್ತಿರುವಾಗ ಏಕಾಏಕಿ ಮನೆಯ ಗೋಡೆ ಕುಸಿತವಾಗಿ ಇವರ ಮೇಲೆ ಬಿದ್ದಿದೆ. ಸ್ಥಳಕ್ಕೆ ಭದ್ರಾವತಿ ತಹಶೀಲ್ದಾರ್ ಪ್ರದೀಪ್ ನಿಕ್ಕಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Laxmi News 24×7