ಭೂಮಿಯ ಮೇಲಿನ ಚರಾಚರ ಜಗತ್ತಿನ ಬದುಕಿಗೆ ಅತ್ಯಂತ ಅವಶ್ಯಕವಿರುವ ನೀರು, ವಾಯು ಸುರಕ್ಷಿತವಿರಬೇಕು. ಅವುಗಳಿಲ್ಲದಿದ್ದರೆ ನಮ್ಮ ಬದುಕಿಲ್ಲ. ವನ್ಯಜೀವಿ, ಪರಿಸರದ ಉಳಿವು, ಜಗತ್ತಿನ ಉಳಿವು ಎಂದು ಅಂಕಲಗಿ ಮಠದ ಸಿದ್ದರಾಮ ಶ್ರೀಗಳು ಹೇಳಿದರು.
ಗುರುವಾರ ಶ್ರೀ ಮಠದ ಆವರಣದಲ್ಲಿ ಸಸಿ ನೆಡುವುದರ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿ ಅಂಕಲಗಿ ಮಠದ ಸಿದ್ದರಾಮ ಶ್ರೀಗಳು ಮಾತನಾಡಿದರು.
ಗುಡ್ಡ, ಬೆಟ್ಟಗಳಲ್ಲಿಯ ಮಣ್ಣು,ಕಲ್ಲು ಅಗೆಯುವದು, ವನ್ಯಪ್ರಾಣಿಗಳ ಮೇಲೆ ಹಿಂಸೆ ಸೇರಿದಂತೆ ಇತರ ನಮ್ಮ ಕ್ರೂರ ನರ್ತನ ನಿಲ್ಲಬೇಕು.
ಪರಿಸರ ಮಾಲಿನ್ಯಕ್ಕೆ ಅಂತ್ಯ ಹಾಡುವ ಕಾರ್ಯ ನಮ್ಮದಾಗಬೇಕು. ಅಂದಾಗ ಈ ಪಾದಯಾತ್ರೆಯ ಉದ್ದೇಶ ಸಫಲವಾಗುವದು ಎಂದು.ಬೆಳಗಾವಿಯ ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ ಪದಾಧಿಕಾರಿಗಳು ಮತ್ತು ಅಡವಿಸಿದ್ಧೇಶ್ವರ ಶರಣರಿಂದ ವನ್ಯಜೀವಿ, ಪರಿಸರ ಸಂರಕ್ಷಣೆಗಾಗಿ ಜರುಗಿದ ಸಹ್ಯಾದ್ರಿಘಟ್ಟದಲ್ಲಿರುವ ಲಿಂಗಾಯತರ ಪವಿತ್ರ ಕ್ಷೇತ್ರ ಉಳಿವಿಗೆ ಬ್ರಹತ್ 4 ದಿನಗಳ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಎಲ್ಲ ಪಾದಯಾತ್ರಾರ್ಥಿಗಳಿಗೆ ಅಡವಿಸಿದ್ಧೇಶ್ವರ ಮಠದ ಅಡವಿ ಸಿದ್ದರಾಮ ಶ್ರೀಗಳು ಶುಭ ಹಾರೈಸಿದರು. ಇದೇ ವೇಳೆ ಸಸಿಯನ್ನು ನೆಡಲಾಯಿತು
Laxmi News 24×7