ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಇವರ ಸಾರಥ್ಯದಲ್ಲಿ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಗೆ ಅತ್ಯುತ್ತಮ ಕೈಗಾರಿಕಾ ಶ್ರೇಷ್ಠ ಪ್ರಶಸ್ತಿ ಲಭಿಸಿದ್ದು, ಈ ಪ್ರಶಸ್ತಿಯನ್ನು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸ ಶ್ರೀಮಂತ ಪಾಟೀಲರು ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಡಾ. ಪ್ರಮೋದ್ ಸಾವಂತ್ ಹಾಗೂ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಶ್ರೀಮತಿ ಸಾಧ್ವಿ ನಿರಂಜನ್ ಜ್ಯೋತಿಯವರಿಂದ ಸ್ವೀಕರಿಸಿದರು.
ಶುಕ್ರವಾರ ರಂದು ಗೋವಾ ರಾಜ್ಯದ ಪಣಜಿಯಲ್ಲಿ “ದಿ. ಶುಗರ್ ಟೆಕ್ನಾಲಾಜಿಸ್ಟ್ಸ್ ಅಸೊಶಿಯೇಶನ್ ಆಫ್ ಇಂಡಿಯಾ” ಅವರು ಆಯೋಜಿಸಿದ 80ನೇ ವಾರ್ಷಿಕ ಸಮಾವೇಶ ಮತ್ತು ಅಂತಾರಾಷ್ಟ್ರೀಯ ಸಕ್ಕರೆ ಎಕ್ಸ್‍ಪೋ 2022 ಉದ್ಘಾಟನೆಯ ಸಮಾರಂಭದಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಡಾ. ಪ್ರಮೋದ್ ಸಾವಂತಯವರು ಭಾಗವಹಿಸಿದರು.
ಪ್ರಶಸ್ತಿಯನ್ನು ಸ್ವೀಕರಿಸಿ ಶ್ರೀನಿವಾಸ ಪಾಟೀಲ ಮಾತನಾಡಿ, ಗೋವಾ ರಾಜ್ಯದಲ್ಲಿ ಎಸ್.ಟಿ.ಎ.ಐ ಅವರು ಆಯೋಜಿಸಿದ ಸಮಾವೇಶದಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಡಾ. ಪ್ರಮೋದ್ ಸಾವಂತ್ ಜೀ ಹಾಗೂ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಶ್ರೀಮತಿ ಸಾಧ್ವಿ ನಿರಂಜನ ಜ್ಯೋತಿ ಅವರ ಶುಭ ಹಸ್ತದಿಂದ ಕೊಡಲ್ಪಟ್ಟ ಶ್ರೇಷ್ಠ ಕೈಗಾರಿಕಾ ಪ್ರಶಸ್ತಿಯಲ್ಲಿ ನಮ್ಮ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಗೆ ಪ್ರಶಸ್ತಿ ಲಭಿಸಿದ್ದು ಸಂತೋಷದ ವಿಷಯ. ಪ್ರಶಸ್ತಿ ಲಭಿಸಲು ಕಾರಣಿಭೂತರಾದ ಕಾರ್ಖಾನೆಯ ಎಲ್ಲ ಆಡಳಿತ ಮಂಡಳಿಯವರು, ಎಲ್ಲಾ ವಿಭಾಗದ ಅಧಿಕಾರಿ ವರ್ಗದವರು ಹಾಗೂ ಕಾರ್ಮಿಕ ಬಂಧುಗಳು ಹಾಗೂ ರೈತ ಬಾಂಧವರಿಗೆ ಅಭಿನಂದನೆಗಳನ್ನು ಕೋರುತ್ತೇವೆ ಎಂದರು.
ಎಸ್.ಟಿ.ಎ.ಐ ಸಕ್ಕರೆ ತಂತ್ರಜ್ಞಾನದ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷರಾದ ಸಂಜಯ್ ಅವಸ್ಥಿ, ನಿರ್ದೇಶಕರಾದ ಎನ್.ಎಸ್.ಐ ನರೇಂದ್ರ ಮೋಹನ್ ಹಾಗೂ ಶುಗರ್ ಇಂಡಸ್ಟ್ರೀಸ್ ವಲಯದ ಎಲ್ಲಾ ಗಣ್ಯಮಾನ್ಯರು, ಹಲವು ರಾಜ್ಯಗಳಿಂದ ಆಗಮಿಸಿದ ಕೈಗಾರಿಕಾ ಸಂಸ್ಥೆಗಳ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಹಲವಾರು ತಂತ್ರಜ್ಞರು ಸೇರಿದಂತೆ ಮತ್ತಿತರರು ಉಪಸ್ಥಿರಿದ್ದರು.