ಬೆಂಗಳೂರು: ನಮಗೆ ಎಲ್ಲ ಜನರ ಜೀವ ಮುಖ್ಯ. ನಾವು ಎಲ್ಲರನ್ನೂ ಸರಿಸಮಾನವಾಗಿ ಕಾಣುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಿಂದ ಹಿಂತಿರುಗಿದ ನಂತರ ಮಂಗಳೂರಿನಲ್ಲಿ ಮತ್ತೊಂದು ಕೊಲೆಯಾಗಿರುವ ಬಗ್ಗೆ ವಿಷಯ ತಿಳಿದು ಮಾಹಿತಿ ಪಡೆಯಲಾಗಿದೆ.
ಕಾನೂನು ಸುವ್ಯವಸ್ಥೆ ಎ.ಡಿ.ಜಿ.ಪಿ ಅವರನ್ನು ಅಲ್ಲಿಯೇ ಇದ್ದು ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದ್ದೇನೆ ಎಂದರು.
ಎಲ್ಲಾ ಮೂರು ಪ್ರಕರಣಗಳಲ್ಲಯೂ ಕಠಿಣ ಕ್ರಮ ವಹಿಸಲಾಗುವುದು. ಕಾನೂನಿನ ವ್ಯಾಪ್ತಿಯಲ್ಲಿ ಅಗತ್ಯವಿರುವ ಕ್ರಮ ವಹಿಸಲಾಗುವುದು. ಅದು ಯು.ಪಿ ಮಾದರಿ ಅಥವಾ ಕರ್ನಾಟಕ ಮಾದರಿಯಾಗಿರಬಹುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
Laxmi News 24×7