Breaking News

ಸಿದ್ದರಾಮೋತ್ಸವ ಸಂಭ್ರಮಕ್ಕೆ ಬೀಳುತ್ತಾ ಬ್ರೇಕ್​..?

Spread the love

ಬೆಂಗಳೂರು: ಸಿದ್ದರಾಮೋತ್ಸವಕ್ಕೆ ಪದೇ ಪದೇ ಕಾರ್ಮೋಡ ಆವರಿಸ್ತಿದೆ. ಪಕ್ಷದ ವೇದಿಕೆಯಲ್ಲಿ ಸಮಾರಂಭ ಮಾಡ್ತೀವಿ ಎನ್ನುತ್ತಿದ್ದ ಸಿದ್ದು ಬೆಂಬಲಿಗರಿಗೆ, ಡಿಕೆಶಿ ಭರ್ಜರಿ ಶಾಕ್ ಕೊಟ್ಟಿದ್ದಾರೆ. ಕೈ ನಾಯಕರ ನಡುವಿನ ಕಲಹ, ಮತ್ತೊಮ್ಮೆ ಸ್ಪೋಟಗೊಂಡಿದೆ.

ಕಾರ್ಯಕ್ರಮವನ್ನ ಹೈಜಾಕ್ ಮಾಡುವ ಪ್ರಯತ್ನಗಳೂ ನಡೀತಿವೆ. ಈ ನಡುವೆ ಸಿದ್ದು ಅಂಡ್ ಟೀಂ ವಿರುದ್ದ ಎಐಸಿಸಿ ನಾಯಕರು ಗರಂ ಆಗಿದ್ದಾರೆ.

ಸಿದ್ದರಾಮೋತ್ಸವಕ್ಕೆ ಪದೇ ಪದೇ ವಿಘ್ನಗಳು ಎದುರಾಗ್ತಾನೇ ಇದೆ. ದೆಹಲಿಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇ.ಡಿ ಇಕ್ಕಟ್ಟಿನಿಂದ ಹೊರಗೆ ಬರೋಕೆ ಆಗ್ತಿಲ್ಲ‌. ಹೈಕಮಾಂಡ್ ನಾಯಕರಿಗೆ ಇ.ಡಿ ಉರುಳು ಮತ್ತಷ್ಟು ಬಿಗಿಯಾಗೋ ಸಾಧ್ಯತೆಗಳೂ ಹೆಚ್ಚುತ್ತಿದೆ. ಹೀಗಿರುವಾಗ ಪಕ್ಷದಲ್ಲಿ ವ್ಯಕ್ತಿ ಪೂಜೆ ಬೇಕಾ? ಪಕ್ಷಕ್ಕೆ ಆಪತ್ತು ಎದುರಾಗಿರುವಾಗ ಸಿದ್ದರಾಮೋತ್ಸವದ ಜಪ ಮಾಡಬೇಕಾ ಅಂತಾ ಎಐಸಿಸಿ ನಾಯಕರು ಗರಂ ಆಗಿದ್ದಾರೆ. ಈ ಮೂಲಕ ಅದ್ದೂರಿ ಸಿದ್ದರಾಮೋತ್ಸವದಲ್ಲಿ ಬ್ಯುಸಿಯಾದವರಿಗೆ ಹೈಕಮಾಂಡ್​ ಭರ್ಜರಿ ಶಾಕ್ ನೀಡಿದೆ.


Spread the love

About Laxminews 24x7

Check Also

ಧರ್ಮಸ್ಥಳ ಕೇಸ್​: ಬಂಧಿತ ಮಾಸ್ಕ್​​ಮ್ಯಾನ್ ಸಿಎನ್​ ಚಿನ್ನಯ್ಯ​ ಯಾರು?

Spread the loveಮಂಗಳೂರು, ಆಗಸ್ಟ್​ 23: ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಆರೋಪ ರಾಜಕೀಯ ತಿರುವು ಪಡೆದುಕೊಂಡಿದೆ. ಇತ್ತ ಬಿಜೆಪಿ ಧರ್ಮದ ಉಳಿವಿಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ