Breaking News

ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಅಪರೂಪದ ಮದುವೆ

Spread the love

ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ ಅಂತಾರೆ. ಯಾರ‌್ಯಾರ ಬಾಳಲ್ಲಿ ಯಾರ‌್ಯಾರು ಸಂಗಾತಿಯಾಗಬೇಕು ಅಂತಾ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತಂತೆ. ಆದ್ರೆ ಇಲ್ಲಿ ಎರಡು ಕುಟುಂಬಗಳು ತಮ್ಮ ಮೂಗ – ಕಿವುಡ ಮಕ್ಕಳ ಮದುವೆ ಆಗುತ್ತೋ ಇಲ್ವೋ ಅಂತಾ ಚಿಂತೆಯಲ್ಲಿದ್ದಾಗ ಮೂಗನೊಬ್ಬ ಆಪತ್ಬಾಂಧವನಾಗಿ ಬಂದಿದ್ದಾನೆ. 

 

 ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಅಪರೂಪದ ಮದುವೆಯೊಂದು ನಡೆದಿದೆ. ರಾಯಬಾಗ ತಾಲೂಕಿನ ಹಾರೂಗೇರಿ ನಿವಾಸಿ ಜ್ಯೋತೆಪ್ಪ ಉಮರಾಣಿ ನೆಚ್ಚಿನ ಮಗಳಾದ ಸ್ವಾತಿ ಮದುವೆ ಮಾಡಲು ಆಗದೇ ಕೊರಗುತ್ತಿದ್ದರು. ಕಾರಣ ಚೆಂದುಳ್ಳಿ ಚೆಲುವೆಯಂತಿದ್ದ ಸ್ವಾತಿಗೆ ಹುಟ್ಟಿನಿಂದ ಮಾತು ಬರಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ.

ಎಲ್ಲರ ಹಾಗೇ ಅದ್ಧೂರಿಯಾಗಿ ಮಗಳ ಮದುವೆ ಮಾಡಬೇಕೆಂದು ತಂದೆ ಜ್ಯೋತೆಪ್ಪ ತಾಯಿ ಪಾರ್ವತಿ ಕನಸು ಕಂಡು ಹಲವು ಕಡೆ ಸಂಬಂಧದ ಹುಡುಕಾಟದಲ್ಲಿ ತೊಡಗಿದ್ದರು. ಆದ್ರೆ ಮಾತು ಬರಲ್ಲ ಎಂಬ ಕಾರಣಕ್ಕೆ ಯಾರೂ ಮದುವೆಯಾಗಲು ಒಪ್ಪಿರಲಿಲ್ಲ. ಮೂಗ ಯುವಕರು ಸಹ ತಾವು ಮೂಗ ಯುವತಿಯನ್ನೇ ಮದುವೆಯಾದ್ರೆ ಕಷ್ಟ ಆಗುತ್ತೆ ಅಂತಾ ಹಿಂದೇಟು ಹಾಕಿದ್ರು ಅನಿಸುತ್ತೆ. ಇದೇ ಕೊರಗಿನಲ್ಲಿದ್ದ ಇವರ ನೆರವಿಗೆ ಬಂದಿದ್ದು ಮತ್ತೋರ್ವ ಮೂಗ ಯೋಗೇಶ್ ಉಮರಾಣಿ.

ಹೌದು ಈ ಯೋಗೇಶ್ ಉಮರಾಣಿ ತನ್ನ ಸ್ನೇಹಿತ ಮುಗಳಖೋಡ ನಿವಾಸಿ ಸಿದ್ದುಗೆ ವಾಟ್ಸಪ್ ಮೂಲಕ ಫೋಟೋ ಬಯೋಡೇಟಾ ಕಳಿಸಿದ್ದಾನೆ. ಬಳಿಕ ಇಬ್ಬರ ಕುಟುಂಬಗಳು ಪರಸ್ಪರ ಒಪ್ಪಿ ಹಾರೂಗೇರಿಯಲ್ಲಿ ಅದ್ಧೂರಿಯಾಗಿ ವಿವಾಹ ಮಾಡಿಕೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ವಧುವಿನ ತಂದೆ ಜ್ಯೋತೆಪ್ಪಗೌಡ, ‘ಮಗಳ ಮದುವೆ ಲೇಟ್ ಆಗ್ತಿದೆ ಅಂತಾ ದುಃಖ ಆಗುತ್ತಿತ್ತು. ಮಗಳನ್ನು ಮದುವೆ ಮಾಡಿಕೊಡಬೇಕೆಂದು ತೋರಿಸಿದಾಗ ಯಾರೂ ಹೆಚ್ಚು ಮುಂದೆ ಬಂದಿರಲಿಲ್ಲ. ಈಗ ಮದುವೆಯಾಗುತ್ತಿರೋದು ಖುಷಿ ತಂದಿದೆ ಎಂದರು‌‌. ಇನ್ನು ವಧುವಿನ ತಾಯಿ ಮದುವೆ ಆಗಿದ್ದು ಬಹಳ ಸಂತೋಷ ಆಗಿದೆ.

ಮಾತನಾಡಲು ಬರದವರು ಬಂದು ಸಹಾಯ ಮಾಡಿ ಮದುವೆ ಮಾಡಿಸಿದ್ದಾರೆ ಎಂದು. ಇನ್ನು ವಧುವಿನ ಸಹೋದರ ರಮೇಶ್ ಮಾತನಾಡಿ ಮಾತನಾಡಲು ಬರದವನೇ ಈ ಸಂಬಂಧ ಕೂಡಿಸಿದ್ದಾನೆ. ಇಂತಹ ಮದುವೆ ನಾನು ಜೀವನದಲ್ಲಿಯೇ ನೋಡಿಲ್ಲ. ವರನ ಸ್ನೇಹಿತ ಮೂಗನಿದ್ದಾನೆ. ಅವನೇ ಈ ಸಂಬಂಧ ಕೂಡಿಸಿದ್ದು ಇಬ್ಬರು ಚೆನ್ನಾಗಿರಲಿ ಅಂತಾ ಭಾವುಕರಾದರು.


Spread the love

About Laxminews 24x7

Check Also

ಗೋಕಾಕ ಜಾತ್ರೆ:ದೇವಿಯರ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ ಹಾಗೂ ಪುತ್ರ ರಾಹುಲ್

Spread the loveಗೋಕಾಕ ಜಾತ್ರೆ:ದೇವಿಯರ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ ಹಾಗೂ ಪುತ್ರ ರಾಹುಲ್ ಜುಲೈ ಒಂದರಿಂದ ಆರಂಭಗೊಂಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ