ಬೆಳಗಾವಿ ನಗರದಲ್ಲಿ ಬರುವ ಅಗಸ್ಟ್ 9ರಂದು ಕ್ರಾಂತಿ ದಿನಾಚರಣೆ ನಿಮಿತ್ಯವಾಗಿ ಮರಾಠಿ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಮರಾಠಿಯಲ್ಲೇ ಎಲ್ಲಾ ಸರಕಾರ ದಾಖಲೆಗಳನ್ನು ಪಡೆಯಬೇಕೆನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಂಇಎಸ್ ಮುಖಂಡರಾದ ದೀಪಕ ದಳವಿ ಹೇಳಿದ್ದಾರೆ.
ಹೌದು ಇಂದು ಶುಕ್ರವಾರ ಬೆಳಗಾವಿ ನಗರದಲ್ಲಿ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ ವತಿಯಿಂದ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಮರಾಠಿ ಭಾಷೆಯಲ್ಲಿಯೇ ಪಡೆಯಬೇಕಂಬ ಬೇಡಿಕೆಯನ್ನು ಇಟ್ಟುಕೊಂಡು ಬರುವ ಅಗಸ್ಟ್ 9ರಂದು ಕ್ರಾಂತಿ ದಿನಾಚರಣೆ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆಯನ್ನು ನಡೆಸಲು ಚಿಂತಿಸಲಾಗಿದೆ ಎಂದು ಎಂಇಎಸ್ ಮುಖಂಡರ ಸಭೆಯಲ್ಲಿ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ನಗರದ ಗೋವಾವೇಸ್‍ನ ಮರಾಠಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಎಂಇಎಸ್ ನಾಯಕರು ಚರ್ಚೆಯನ್ನು ನಡೆಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಂಇಎಸ್ ಅಧ್ಯಕ್ಷರಾದ ದೀಪಕ್ ಧಳವಿರವರು, ಭಾಷಿಕ ಅಲ್ಪಸಂಖ್ಯಾತರಾದವರಿಗೆ ಅವರ ಮಾತೃಭಾಷೆಯಲ್ಲಿಯೇ ಸರಕಾರಿ ದಾಖಲಾತಿಗಳನ್ನು ನೀಡಬೇಕೆಂಬ ಆದೇಶವಿದೆ. ಆದರೆ ಸರಕಾರ ಈ ಕೆಲಸ ಮಾಡುತ್ತಿಲ್ಲವಾದ್ದರಿಂದ ಈ ರೀತಿ ಶಾಂತಿಭಂಗಗಳು ಆಗುತ್ತಿವೆ. ಮಹಾರಾಷ್ಟ್ರದಲ್ಲಿ ಸರಕಾರಿ ಅಧಿಕಾರಿಗಳಾಗಿದ್ದ ದಿನೇಶ್ ಓಉಳಕರ್‍ರವರು ಭಾಷಾ ಅಲ್ಪಸಂಖ್ಯಾತರ ಕುರಿತಂತೆ ಮರಾಠಿಯಲ್ಲಿ ಭಾಷಾಂತರ ಮಾಡಿ ಲೇಖನವನ್ನು ನೀಡಿದ್ದಾರೆ. ಹಾಗಾಗಿ ಅವರಿಗೆ ನಾವು ತುಂಬಾ ಧನ್ಯವಾದಗಳನ್ನು ಹೇಳುತ್ತೇವೆ ಎಂದರು.