ಪುತ್ತೂರು : ಬೆಳಗಾವಿ ಮೂಲದ ಯುವತಿ ಪುತ್ತೂರಿನ ಸಂಸ್ಥೆಯೊಂದಕ್ಕೆ ಕೆಲಸ ಅರಸಿಕೊಂಡು ಬಂದ ವೇಳೆ ಅನ್ಯ ಧರ್ಮದ ವ್ಯಕ್ತಿಯ ಜತೆಗಿರುವುದನ್ನು ಗಮನಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಆತನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಜು.21 ರಂದು ಮಂಜಲ್ಪಡ್ಪು ಬಳಿ ಸಂಭವಿಸಿದೆ.
ಬೆಳಗಾವಿಯ ಗಾನಪುರ ಮೂಲದ ಹಿಂದೂ ಯುವತಿ ಮಂಗಳೂರು ಫಿಶ್ ಕಂಪೆನಿಯಲ್ಲಿ ಕೆಲಸಕ್ಕಿದ್ದು ಅಲ್ಲಿಂದ ಪುತ್ತೂರು ಮಂಜಲ್ಪಡ್ಪುವಿನಲ್ಲಿರುವ ಸಂಸ್ಥೆಯಲ್ಲಿ ಕೆಲಸಕ್ಕೆಂದು ಬಂದಿದ್ದರು.
ಈ ವೇಳೆ ಮುಕ್ವೆಯ ಅನ್ಯ ಧರ್ಮದ ವ್ಯಕ್ತಿ ಆಕೆಗೆ ಸಂಸ್ಥೆಯ ವಿಳಾಸ ತೋರಿಸಿದ್ದಾರೆ. ಆದರೆ ಆತ ಯುವತಿಗೆ ಉದ್ಯೋಗದ ಆಮಿಷವೊಡ್ಡಿ ಪುತ್ತೂರಿಗೆ ಕರಸಿಕೊಂಡ ವಿಚಾರದಲ್ಲಿ ಹಿಂದು ಸಂಘಟನೆ ಈ ಕುರಿತು ಹೆಚ್ಚಿನ ವಿಚಾರಣೆ ಮಾಡುವಂತೆ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.