ಧಾರವಾಡ: ಟಂಟಂ ವಾಹನವನ್ನು ತೊಳೆಯಲೆಂದು ಕೆರೆಗೆ ಇಳಿದಿದ್ದ ತಂದೆ-ಮಗ ಇಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕ್ಯಾರಕೊಪ್ಪ ಗ್ರಾಮದ ಗದಿಗೆಪ್ಪ ಅಂಗಡಿ (ತಂದೆ) ಹಾಗೂ ರವಿ ಅಂಗಡಿ (ಮಗ) ಸಾವಿಗೀಡಾದ ದುರ್ದೈವಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇವರಿಬ್ಬರೂ ಇಂದು ಬೆಳಿಗ್ಗೆ ಟಂಟಂ ವಾಹನ ತೊಳೆಯಲೆಂದು ಗ್ರಾಮದ ಹೊರವಲಯ ನವೋದಯ ಶಾಲೆಯ ಪಕ್ಕದ ಕರೆಗೆ ಇಳಿದಾಗ ಕಾಲು ಜಾರಿ ಕರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ತಂದೆ ಗದಿಗೆಪ್ಪನ ಶವ ದೊರೆತಿದ್ದು, ರವಿಯ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
Laxmi News 24×7